ಮೈಸೂರು: ಆ.19 ರಂದು ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ

ಮೈಸೂರು,ಆಗಸ್ಟ್,5,2025 (www.justkannada.in): ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಗಸ್ಟ್ 19 (ಮಂಗಳವಾರ) ರಂದು ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಸುದ್ದಿ ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಆಗಸ್ಟ್ 19ರಂದು ಪತ್ರಕರ್ತರ ಭವನದಲ್ಲಿ ನಡೆಯುವ ವಿಶ್ವ ಛಾಯಾಗ್ರಹಣ ದಿನಾಚರಣೆ ಸಮಾರಂಭದಲ್ಲಿ ಛಾಯಚಿತ್ರ ಪ್ರದರ್ಶನ ಮತ್ತು ಸ್ಪರ್ಧೆ ನಡೆಯಲಿದ್ದು, ಇದೇ ಸಮಾರಂಭದಲ್ಲಿ ಗಣ್ಯರು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಲಿದ್ದಾರೆ.

ಛಾಯಾಚಿತ್ರ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸುವ ಛಾಯಾಗ್ರಾಹಕರು ಈ ಕೆಳಕಂಡ ನಿಯಮಾವಳಿಗಳನ್ನು ಅನುಸರಿಸಬೇಕು:

  1. ಸುದ್ದಿ ಛಾಯಾಚಿತ್ರವು ದಿನಾಂಕ: 01-01-2023ರಿಂದ 31-07-2025ರ ಅವಧಿಗೆ ಒಳಪಟ್ಟಿರಬೇಕು.
  2. ಛಾಯಾಗ್ರಾಹಕರು 12 *18 ಅಳತೆಯ 3 ಛಾಯಾಚಿತ್ರವನ್ನು ಮುದ್ರಿಸಿ ಪ್ರದರ್ಶನಕ್ಕೆ ನೀಡತಕ್ಕದ್ದು.
  3. ಛಾಯಾಚಿತ್ರದಲ್ಲಿ ಛಾಯಾಗ್ರಾಹಕರ ಹೆಸರು ಮತ್ತು ಚೌಕಟ್ಟು ಇರಬಾರದು.
  4. ವನ್ಯ ಜೀವಿ ಸಂಬಂಧಿಸಿದ ಚಿತ್ರಗಳನ್ನು ಪರಿಗಣಿಸಲಾಗುವುದಿಲ್ಲ.
  5. ಮೊದಲ ಬಹುಮಾನ 10,000 ರೂ, ಎರಡನೇ ಬಹುಮಾನ 5,000 ರೂ. ಮತ್ತು ಮೂರನೇ ಬಹುಮಾನ 3,000 ರೂ. ಗಳ ನಗದು ಪುರಸ್ಕಾರವನ್ನು ನಿಗದಿಪಡಿಸಲಾಗಿದ್ದು, ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು.
  6. ಹಿರಿಯ ಛಾಯಾಗ್ರಾಹಕರು, ಹಿರಿಯ ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿಭಾಗದ ಸಿಬ್ಬಂದಿಗಳು ತೀರ್ಪುಗಾರರಾಗಿ ಆಗಮಿಸಲಿದ್ದು, ಇವರ ತೀರ್ಮಾನವೇ ಅಂತಿಮವಾಗಿರುತ್ತದೆ.
  7. ಛಾಯಾಚಿತ್ರಗಳನ್ನು ಆಗಸ್ಟ್ 15ರೊಳಗೆ ಜಿಲ್ಲಾ ಪತ್ರಕರ್ತರ ಸಂಘಕ್ಕೆ ತಲುಪಿಸಬೇಕು.

ಹೆಚ್ಚಿನ ಮಾಹಿತಿಗೆ ಮೊ. ನಂ. 9741511340, 9845653548, 7019329722 ಇಲ್ಲಿಗೆ ಸಂಪರ್ಕಿಸಬಹುದಾಗಿದೆ.

Key words: Photography, exhibition, competition, Mysore District Journalists Association