ನವದೆಹಲಿ,ಆಗಸ್ಟ್,4,2025 (www.justkannada.in): ಚೀನಾ ಭಾರತದ ಗಡಿ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ತರಾಟೆ ತೆಗೆದುಕೊಂಡಿದೆ.
ಭಾರತದ ಗಡಿ ಪ್ರದೇಶವನ್ನ ಚೀನಾ ಆಕ್ರಮಿಸಿಕೊಂಡಿದೆ ಎಂದು ಹೊರಗೆ ಹಲವು ಬಾರಿ ಹೇಳಿದ್ದೀರಿ ಈ ವಿಚಾರ ಪ್ರಸ್ತಾಪಿಸಿದ್ದೀರಿ ಸಾಮಾಜಿಕ ಜಾಲತಾಣದಲ್ಲಿ ನೀವು ಹಲವು ಬಾರಿ ಪ್ರಸ್ತಾಪ ಮಾಡಿದ್ದೀರಿ ನೀವು ಈ ವಿಚಾರವನ್ನ ಸಂಸತ್ ಅಧಿವೇಶನದಲ್ಲಿ ಯಾಕೆ ಪ್ರಶ್ನೆ ಮಾಡಲಿಲ್ಲ. ಚೀನಾ ನಮ್ಮ ಭೂಮಿ ಆಕ್ರಮಿಸಿಕೊಂಡಿದ ಎಂದು ಹೇಳಿದ್ದೀರಿ ನಿಮ್ಮ ಹೇಳಿಕೆಗಳಿಗೆ ಸಂಬಂಧಿಸಿದ ದಾಖಲೆಗಳು ಏನಾದರೂ ಇದೆಯಾ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ನಿಜವಾದ ಭಾರತೀಯರು ಯಾರು ಕೂಡ ಈ ರೀತಿ ಹೇಳಿಕೆ ನೀಡಲ್ಲ ನೀವು ಜವಾಬ್ದಾರಿ ಸ್ಥಾನದಲ್ಲಿ ಇದ್ದೀರಿ ಈ ರೀತಿ ಹೇಳಿಕೆ ನೀಡಬೇಡಿ ಎಂದು ರಾಹುಲ್ ಗಾಂಧಿಗೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ.
Key words: Supreme Court, Rahul Gandhi , China, India, border