ರಾಜ್ಯದಲ್ಲಿ DRUGS ಜಾಲ: ANTF ಗೆ ಮೇಜರ್ ಸರ್ಜರಿ.

ಬೆಂಗಳೂರು,ಆಗಸ್ಟ್,4,2025 (www.justkannada.in): ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆಯಾದ ಬೆನ್ನಲ್ಲೆ ಇದೀಗ  ರಾಜ್ಯದಲ್ಲಿ  ಡ್ರಗ್ಸ್ ಹಾವಳಿಗೆ ಕಡಿವಾಣ ಹಾಕುವ ಸಲುವಾಗಿ  ರಾಜ್ಯ ಸರ್ಕಾರ ಮಾದಕವಸ್ತು ವಿರೋಧಿ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದೆ.

ANTF ಗೆ ಮೇಜರ್ ಸರ್ಜರಿ ನಡೆಸಿರುವ ರಾಜ್ಯ ಸರ್ಕಾರ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆಯನ್ನು ರಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಲ್ಲಿ ನಾರ್ಕೋಟಿಕ್ಸ್ ಸಂಬಂಧ ದಾಖಲಾಗುವ ಪ್ರಕರಣಗಳ ಮೇಲ್ವಿಚಾರಣೆಗಾಗಿ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ (Anti Narcotic Task Force) ಘಟಕವನ್ನು 10 ಹುದ್ದೆಗಳ ಸೃಜಿಸಿದೆ.

ಹಾಗೆಯೇ ಕಾರ್ಯಪಡೆಗೆ ಅವಶ್ಯವಿರುವ 2 ಪಿಐ, 4 ಪಿಎಸ್ಐ, 20 ಸಿಹೆಚ್​ಸಿ, 30 ಸಿಪಿಸಿ ಸೇರಿ ಒಟ್ಟು 56 ಹುದ್ದೆಗಳನ್ನು ನಕ್ಸಲ್ ನಿಗ್ರಹ ಪಡೆ (Anti Naxal Force) ಘಟಕದಿಂದ ವರ್ಗಾಯಿಸಲು ಹಾಗೂ ಮಾದಕ ವಸ್ತುಗಳ ವಿರೋಧಿ ಕಾರ್ಯಪಡೆ (Anti Narcotic Task Force) ಘಟಕವು ಒಟ್ಟಾರೆಯಾಗಿ ಡಿಜಿ ಮತ್ತು ಐಜಿಪಿರವರ ಅಧೀನದಲ್ಲಿ ಕಾರ್ಯನಿರ್ವಹಿಸುವಂತೆ ಮತ್ತು ಡಿ.ಜಿ., ಸೈಬರ್ ಕಮಾಂಡ್‌ರವರಿಗೆ ಕಾರ್ಯವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಜೊತೆಗೆ ಹೊಸದಾಗಿ 2 ಎಎಸ್​ಪಿ, 2 ಡಿವೈಎಸ್​ಪಿ/ಎಸಿಪಿ, ತಲಾ 1 ಸಹಾಯಕ ಆಡಳಿತಾಧಿಕಾರಿ, ಶಾಖಾಧೀಕ್ಷಕರು, ಕಿರಿಯ ಸಹಾಯಕರು, ಪ್ರಥಮ ದರ್ಜೆ ಸಹಾಯಕರು, ಶೀಘ್ರ ಲಿಪಿಗಾರರು ಮತ್ತು ದಲಾಯತ್ ಸೇರಿ 10 ಹುದ್ದೆಗಳನ್ನು ಸೃಜಿಸಲು ಆದೇಶಿಸಲಾಗಿದೆ.

ಸೃಜಿಸಲಾಗುವ ಘಟಕವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ANTFರವರಿಗೆ ಕಾರ್ಯವರದಿ ಮಾಡಿಕೊಳ್ಳತಕ್ಕದ್ದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ANTF ರವರು ಡಿಜಿ ಮತ್ತು ಐಜಿಪಿಯವರಿಗೆ ಕಾರ್ಯವರದಿ ಮಾಡಿಕೊಳ್ಳಲು ಮಾಡಿಕೊಳ್ಳತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Key words: Drugs, network, Major surgery, ANTF