ಕಳಚಿದ ದೊಡ್ಮನೆಯ ಹಿರಿಯ ಕೊಂಡಿ: ಡಾ. ರಾಜ್ ಕುಮಾರ್ ಸಹೋದರಿ ನಾಗಮ್ಮ ನಿಧನ.

ಚಾಮರಾಜನಗರ,ಆಗಸ್ಟ್,1,2025 (www.justkannada.in): ಕಳಚಿದ ದೊಡ್ಡಮನೆಯ ಹಿರಿಯ ಕೊಂಡಿ. ನಟ ದಿ. ಡಾ.ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ(95) ನಿಧನರಾಗಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ವೇಳೆಗೆ ಚಾಮರಾಜನಗರ ಸಮೀಪದಲ್ಲಿರುವ ತಾಳವಾಡಿ ತಾಲೂಕಿನ ಬಳಿ ಇರುವ ಗಾಜನೂರಿನಲ್ಲಿ ನಾಗಮ್ಮ ಕೊನೆಯುಸಿರೆಳೆದಿದ್ದಾರೆ

ಅಣ್ಣಾವ್ರು ಡಾ.ರಾಜ್ ಕುಮಾರ್ ಅವರು  ಪ್ರೀತಿಯಿಂದ ಕಟ್ಟಿಸಿದ್ದ ಮನೆಯಲ್ಲಿ ನಾಗಮ್ಮ ವಾಸವಿದ್ದರು. ಈ ಮಧ್ಯೆ  ಕಳೆದ ಹಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಾಗಮ್ಮ ಇದೀಗ ಇಂದು ನಿಧನರಾಗಿದ್ದಾರೆ.vtu

Key words: Dr. Rajkumar, sister, Nagamma ,passes away.