ಬೆಂಗಳೂರು,ಜುಲೈ,31,2025 (www.justkannada.in): ಕೆ.ಆರ್ ನಗರ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನಾಳೆ ಪ್ರಕಟವಾಗಲಿದ್ದು, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದೆ.
ನಿನ್ನೆಯೇ ಅಂತಿಮ ತೀರ್ಪು ಹೊರಬೀಳಬೇಕಿತ್ತು.ಆದರೆ ಕೆಲವು ಸ್ಪಷ್ಟೀಕರಣ ಬೇಕಾದ ಹಿನ್ನಲೆಯಲ್ಲಿ ನಿನ್ನೆ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆಗಸ್ಟ್ 1ಕ್ಕೆ ತೀರ್ಪು ಕಾಯ್ದಿರಿಸಿದ್ದಾರೆ.
ಜುಲೈ 29 ವಿಚಾರಣೆ ಪೂರ್ಣಗೊಳಿಸಿದ್ದು ತೀರ್ಪು ಕಾಯ್ದಿರಿಸಲಾಗಿದೆ. ಎಸ್ ಐಟಿ ವಶ ಪಡಿಸಿಕೊಂಡಿದ್ದ ಮೊಬೈಲ್ ಅನ್ನ ಸಾಕ್ಷಿಯಾಗಿ ಪರಿಗಣಿಸಬೇಕೇ ಬೇಡವೇ ಎಂಬುವುದ ಬಗ್ಗೆ ಎರಡೂ ಕಡೆ ವಕೀಲರನ್ನ ನ್ಯಾಯಾಧೀಶರು ಪ್ರಶ್ನಿಸಿದ್ದರು. ಸರ್ಕಾರದ ಪರ ಎಪಿಪಿ ಜಗದೀಶ್, ಅಶೋಕ್ ನಾಯಕ್ ವಾದ ಮಂಡಿಸಿದರೆ ಪ್ರಜ್ವಲ್ ರೇವಣ್ಣ ಪರ ವಕೀಲ ಅರುಣ್ ಜಿ ವಾದ ಮಂಡನೆ ಮಾಡಿದ್ದಾರೆ. ನಾಳೆ ಅಂತಿಮ ತೀರ್ಪು ಪ್ರಕಟವಾಗಲಿದ್ದು ಪ್ರಜ್ವಲ್ ರೇವಣ್ಣ ಭವಿಷ್ಯ ನಿರ್ಧಾರವಾಗಲಿದೆ.
Key words: Rape case, Prajwal Revanna, Court, decided, tomorrow