ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕೈತಪ್ಪಿದೆ ಎಂದು ಖರ್ಗೆ ಹೇಳಿಲ್ಲ- ಸಚಿವ ಸತೀಶ್ ಜಾರಕಿಹೊಳಿ

ಬೆಂಗಳೂರು,ಜುಲೈ,30,2025 (www.justkannada.in): ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕೈತಪ್ಪಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಲ್ಲ.  ನಮ್ಮವರಿಂದ ಸಿಎಂ ಸ್ಥಾನ ಕೈತಪ್ಪಿದ್ದು ಎಂದು ಖರ್ಗೆ ಅಂದಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, 1999ರಲ್ಲಿ ತನಗೆ ಸಿಎಂ ಸ್ಥಾನ ಕೈತಪ್ಪಿದೆ ಎಂದಿದ್ದಾರೆ ಖರ್ಗೆ ನಮ್ಮವರಿಂದ ಸಿಎಂ ಸ್ಥಾನ ಕೈತಪ್ಪಿದ್ದು ಅಂದಿದ್ದಾರೆ. ಸಿದ್ದರಾಮಯ್ಯರಿಂದ ಸಿಎಂ ಸ್ಥಾನ ಕೈತಪ್ಪಿದೆ ಎಂದಿಲ್ಲ ರಾಜ್ಯ ರಾಜಕೀಯಕ್ಕೆ ಖರ್ಗೆಯವರು ಬರಹುದು ಖರ್ಗೆರನ್ನ ರಾಷ್ಟ್ರ ರಾಜಕೀಯಕ್ಕೆ ಕಳುಹಿಸಿದ್ದು ಹೈಕಮಾಂಡ್ ನವರು.  ಪವರ್ ಸೆಂಟರ್ ಹೆಚ್ಚಾಗಬಾರದೆಂದು ದೆಹಲಿಗೆ ಕಳಿಸಿತ್ತು. ವಾಪಸ್ ರಾಜ್ಯಕ್ಕೆ ಕಳುಹಿಸಬೇಕಾದರೇ ಹೈಕಮಾಂಡ್ ನಿರ್ಧರಿಸುತ್ತೆ ಎಂದರು.

ಸಿಎಂ ಸಿದ್ದರಾಮಯ್ಯರಿಂದ ಶಾಸಕರ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ ರನ್ನು ಯಾಕೆ ಕರೆದಿಲ್ಲ ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಬೆಂಗಳೂರು ಶಾಸಕರನ್ನ ಕೈಬಿಟ್ಟಿಲ್ಲ ಹಂತ ಹಂತವಾಗಿ ಸಭೆ ನಡೆಯಲಿದೆ. ಸುರ್ಜೇವಾಲ ಮೊದಲು ಬೆಂಗಳೂರು ಶಾಸಕರ ಸಭೆ ನಡೆಸಿದ್ದರು. ಈಗ  ಸಿಎಂ ಸಿದ್ದರಾಮಯ್ಯ ಮೊದಲು ಜಿಲ್ಲಾವಾರು ಸಭೆ ಮಾಡುತ್ತಿದ್ದಾರೆ ಕೆಪಿಸಿಸಿ ಅಧ್ಯಕ್ಷರು ಸಭೆ ಕರೆಯುವ ಬಗ್ಗೆ ಅವರೇ ತೀರ್ಮಾನಿಸಲಿ ಎಂದರು.

ಕೆಎಂಎಫ್  ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ವಿಚಾರ , ಯಾರ ಪರ ಹೆಚ್ಚು ಮತ ಬರುತ್ತೋ ಅವರು ಅಧ್ಯಕ್ಷರಾಗುತ್ತಾರೆ ಇದು ಪಕ್ಷದ ಚುನಾವಣೆ ಅಲ್ಲ. ಡಿಕೆ ಸುರೇಶ್ ಆದ್ರೂ ಇಲ್ಲಿ ಪಕ್ಷ ಬರಲ್ಲ ಸಹಕಾರಿ ಚುನಾವಣೆ ಇದು.  ಸರ್ಕಾರ ಇದ್ದಾಗ ಕೂಡ ವಿರೋಧ ಪಕ್ಷದಿಂದ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಇದ್ರೂ ಕೂಡ ಮೆಜಾರಿಟಿ ಮುಖ್ಯವಾಗುತ್ತೆ ಎಂದರು.vtu

Key words: Mallikarjuna Kharge, Siddaramaiah, CM, post, Minister, Sathish Jarkiholi