ಕಾವೇರಿ ನದಿಯಲ್ಲಿ ಪೆಟ್ರೋಲ್ ಬೋಟ್ ನಡೆಸುತ್ತಿರುವ ಆರೋಪ: ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ

ಮೈಸೂರು,ಜುಲೈ, 25,2025 (www.justkannada.in):  ಜಿಲ್ಲೆಯ ಟಿ.ನರಸೀಪುರ ತಾಲ್ಲೂಕು, ತಲಕಾಡು ಹೋಬಳಿ, ಹೆಮ್ಮಿಗೆ ಪಂಚಾಯ್ತಿ ವ್ಯಾಪ್ತಿಯಲ್ಲಿರುವ  ಕಾವೇರಿ ನದಿಯಲ್ಲಿ ನಿತ್ಯ ಪೆಟ್ರೋಲ್ ಬೋಟ್‌ಗಳನ್ನು ನಡೆಸುತ್ತಿರುವುದಾಗಿ ದೂರು  ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಜಿಲ್ಲಾಡಳಿತ ಕಚೇರಿಯಿಂದ ಸೂಚನೆ ನೀಡಲಾಗಿದೆ.

ಅನುಮತಿ ಪಡೆಯದೇ ಕಾವೇರಿ ನದಿ ತೀರದ ಕಟ್ಟೆಪುರದಲ್ಲಿರುವ ತಲಕಾಡು ಜಲಧಾಮ (ರೆಸಾರ್ಟ್)ರವರು ಮಾಲೀಕ ಟಿ.ಎನ್.ನಾರಾಯಣ್ ಅವರು ಪೆಟ್ರೋಲ್ ಬೋಟ್ ನಡೆಸುತ್ತಿರುವುದಾಗಿ    ಟಿ.ನರಸೀಪುರ ತಾಲ್ಲೂಕಿನ ಟಿ.ಬೆಟ್ಟಹಳ್ಳಿ ಗ್ರಾಮದ ಬಿ.ಸಿ. ಶಾಂತರಾಜು ಎಂಬುವವರು ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಿದ್ದರು.

ಹೆಮ್ಮಿಗೆ ಪಂಚಾಯ್ತಿ ವ್ಯಾಪ್ತಿಯಲ್ಲಿರುವ, ಕಾವೇರಿ ನದಿ ತೀರದ ಕಟ್ಟೆಪುರದಲ್ಲಿರುವ ತಲಕಾಡು ಜಲಧಾಮ (ರೆಸಾರ್ಟ್) ಮಾಲೀಕ ಟಿ.ಎನ್.ನಾರಾಯಣ್  ಅವರು ಕಟ್ಟಿಪುರದವರೆಗೆ ನಡುವೆ ಇರುವ ಕಾವೇರಿ ನದಿಯಲ್ಲಿ ಹಗಲು ರಾತ್ರಿಯನ್ನದೇ ಪೆಟ್ರೋಲ್ ಬೋಟ್‌ ಗಳನ್ನು ನಡೆಸುತ್ತಿದ್ದು ಹಾಗೂ ಕತ್ತಲಾಗಿದ್ದರೂ ಡಿಜೆ ಸೌಂಡ್ ಸಿಸ್ಟಮ್ ಅಳವಡಿಸಿ ಆರ್ಕೆಸ್ಟ್ರಾ  ನಡೆಸುತ್ತಾರೆ. ಇದರಿಂದ ಸಮೀಪದ ಗ್ರಾಮಸ್ಥರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ.  ಹಾಗೆಯೇ ಪೆಟ್ರೋಲ್ ದೋಣಿ ಓಡಾಟದಿಂದ ನೀರು ಕಲುಷಿತವಾಗಿತ್ತಿದ್ದು, ತಲಕಾಡು ಜಲಧಾಮ (ರೆಸಾರ್ಟ್)ರವರು ಬೋಟಿಂಗ್ ಮಾಡಲು ಯಾವುದೇ ಇಲಾಖೆಯವರ ಅನುಮತಿ ಪಡೆದುಕೊಂಡಿಲ್ಲ. ಹೀಗಾಗಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಶಾಂತರಾಜು ಅವರು ಮನವಿ ಮಾಡಿದ್ದರು.

ಇದೀಗ ಈ ದೂರಿಗೆ ಸ್ಪಂದಿಸಿರುವ ಮೈಸೂರು ಜಿಲ್ಲಾಡಳಿತ ಕಚೇರಿಯು,  ಶಾಂತರಾಜು ಮನವಿಯಲ್ಲಿನ ಅಂಶಗಳ ಬಗ್ಗೆ ನಿಯಮಾನುಸಾರ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವಂತೆ ಮೈಸೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಮತ್ತು ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚಿಸಿದೆ.vtu

Key words: petrol boat, Cauvery River, necessary action, Mysore, DC Office