ಕೇಂದ್ರಕ್ಕೆ ಅಪವಾದ ತರಲು ವ್ಯಾಪಾರಿಗಳಿಗೆ ನೋಟಿಸ್: ಇದು ಸ್ವಯಂಕೃತ ಅಪರಾಧ- ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು,ಜುಲೈ,23, 2025 (www.justkannada.in): ಕೇಂದ್ರ ಸರ್ಕಾರಕ್ಕೆ ಅಪವಾದ ತರಲು ರಾಜ್ಯ ಸರ್ಕಾರ ಸಣ್ಣ ಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತಿದೆ.  ಇದು ಸ್ವಯಂಕೃತ ಅಪರಾಧ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಮುಡಾ ಕೇಸ್ ನಲ್ಲಿ ಸುಪ್ರೀಂಕೋರ್ಟ್ ಆದೇಶ ಗೌರವಿಸುತ್ತೇವೆ. ಸಿದ್ದರಾಮಯ್ಯ ನಿರಪರಾಧಿ ಅಂತಾ ಕ್ಲೀನ್ ಚಿಟ್ ಕೊಟ್ಟಿದ್ದಾರಾ?  ಕ್ಲಿನ್ ಚಿಟ್ ಕೊಟ್ಟಿದ್ದರೆ ಕಾಂಗ್ರೆಸ್ ವಿಜೃಂಭಿಸಬೇಕು. ಆದರೆ ಸಿದ್ದರಾಮಯ್ಯನವರೇ ನೀವು ಈಗಲೂ ಕೂಡ ಅಪರಾಧಿಯೇ..? ಇವತ್ತಲ್ಲ ನಾಳೆ ನೀವು ಸಿಕ್ಕಿ ಬೀಳುತ್ತೀರಿ.  ಸಿಎಂ ಅವರೇ ನೀವು ದಾಖಲೆಗಳನ್ನ ಮುಚ್ಚಿಟ್ಟಿದ್ದರಿಂದ  ಕೋರ್ಟ್ ನಲ್ಲಿ ದಾಖಲೆ ಕೊಡಲು ಕಷ್ಟವಾಯಿತು ಎಂದರು.

ವಿಧಾನಮಂಡ ಮಂಡಲ ಅಧಿವೇಶನ 11 ದಿನ ಮಾತ್ರ ಕರೆದಿದ್ದಾರೆ. ಇದರಲ್ಲಿ ಮೊದಲ ದಿನ ಲೆಕ್ಕವೇ ಇಲ್ಲ.  8 ದಿನ ಮಾತ್ರ ಅಧಿವೇಶನ ನಡೆಯಲಿದೆ.  ಕೆಲವು ವಿಧೇಯಕಗಳನ್ನ ಪಾಸ್ ಮಾಡಿಕೊಳ್ಳಲು ಸರ್ಕಾರ ನುಣುಚಿಕೊಳ್ಳಲು ಅಧೀವೇಶನ ಕರೆದಂತಿದೆ.  ಪೊಲೀಸ್ ಇಲಾಖೆ,  ಕಾಂಗ್ರೆಸ್ ನವರು ಮಾಡಿದ ಅನಾಹುತಗಳು, ಭ್ರಷ್ಟಾಚಾರಿಗಳಿಗೆ ಕ್ಲಿನ್ ಚಿಟ್ ಕೊಡಲು ಮಾತ್ರ ಬಳಕೆಯಾಗುತ್ತಿದೆ   ಹಿಂದೂ ದೇವಸ್ಥಾನಗಳನ್ನ ಟಾರ್ಗೆಟ್ ಮಾಡುವ ಕೆಲಸ ಮಾಡುತ್ತಿದ್ದಾರೆ.  ಕೇರಳ ಪೊಲೀಸರು ಬಂದು ತನಿಖೆ ಮಾಡುವಂತೆ ಕಮ್ಯುನಿಸ್ಟ್ ಗಳು ಪತ್ರ ಬರೆಯುತ್ತಿದ್ದಾರೆ . ಈ ಎಲ್ಲಾ ವಿಚಾರಗಳನ್ನ ಸದನದಲ್ಲಿ ಪ್ರಸ್ತಾಪ ಮಾಡಬೇಕಿದೆ.  ಸಿದ್ದರಾಮಯ್ಯ ಸರ್ಕಾರ ಸುಳ್ಳು ಮೋಸ ವಂಚನೆಗೆ ಹೆಸರಾಗಿದೆ ಎಂದು ವಾಗ್ದಾಳಿ ನಡೆಸಿದರು.vtu

Key words: Notice, traders, self-inflicted crime, Chalavadi Narayanaswamy