ಸರ್ಕಾರದ ಖಜಾನೆ ಖಾಲಿ: ಸಿಎಂ ವಸೂಲಿಗೆ ಇಳಿದಿದ್ದಾರೆ- ಬಿ.ವೈ ವಿಜಯೇಂದ್ರ

ಬೆಂಗಳೂರು,ಜುಲೈ,23,2025 (www.justkannada.in): ಸಣ್ಣ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಾಗಿ ಹಣ ಸಂಗ್ರಹಕ್ಕೆ  ರಾಜ್ಯ ಸರ್ಕಾರ ಅಧಿಕಾರಿಗಳ ಮೂಲಕ ಸಣ್ಣ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡುತ್ತಿದೆ.    ಈ ಮೂಲಕ ಸಿಎಂ ಸಿದ್ದರಾಮಯ್ಯ ವಸೂಲಿಗೆ ಇಳಿದಿದ್ದಾರೆ. ಅಕ್ರಮ ನಡೆಸುತ್ತಿರುವುದು ಸರ್ಕಾರ. ಹೀಗಾಗಿ ವ್ಯಾಪಾರಿಗಳ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ.  ಆನೇಕ ವಸ್ತುಗಳು ಜಿಎಸ್ ಟಿ ವ್ಯಾಪ್ತಿಗೆ ಬರಲ್ಲ ಎಂದರು.

ಬಿಜೆಪಿ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ  ಬಿವೈ ವಿಜಯೇಂದ್ರ,  ಕಾಂಗ್ರೆಸ್ ಪುಡಾರಿಗಳು ಬಿಜೆಪಿ ಕಚೇರಿ ಬಳಿ ದಾಂಧಲೆ ಮಾಡಿದ್ದಾರೆ.  ಡಿಕೆ ಶಿವಕುಮಾರ್ ಗೆ ಹೇಳಲು ಬಯಸುತ್ತೇನೆ ನಮ್ಮ ಪಕ್ಷದ ಕಾರ್ಯಕರ್ತರಿಗೂ ಶಕ್ತಿ ಇದೆ ಎಂದು ಟಾಂಗ್ ಕೊಟ್ಟರು.vtu

Key words: Government, treasury , empty, Notice, Small traders, BY Vijayendra