ಸಿಎಂ ನನ್ನ ಪಾತ್ರ ಇಲ್ಲ ಅಂದಿದ್ದರು: ಈಗ ಅದೇ ಸತ್ಯ ಅಂತಾಗಿದೆ- ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು,ಜುಲೈ,22,2025 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿ ಕೇಂದ್ರ ಸರ್ಕಾರವನ್ನ ತರಾಟೆ ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪರಮೇಶ್ವರ್, ಮುಡಾ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನನ್ನ ಪತ್ನಿಯ ಪಾತ್ರವೂ ಇಲ್ಲ ಎಂದು  ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದರು. ಈಗ ಸುಪ್ರೀಂಕೋರ್ಟ್ ತೀರ್ಪಿನಿಂದ ಅದೇ ಸತ್ಯ ಅಂತಾಗಿದೆ ಎಂದರು.

ಬಿಜೆಪಿ ನಾಯಕರು ಕ್ಷಮೆ ಕೇಳಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸುಪ್ರೀಂಕೋರ್ಟ್  ತೀರ್ಪು  ಪ್ರಕರಣದಲ್ಲಿ ಸತ್ಯಾಸತ್ಯತೆಯ ನ್ಯಾಯ ಅನ್ಯಾಯದ ತೀರ್ಮಾನ ಆಗಿದೆ.   ಸುಪ್ರೀಂ ತೀರ್ಪಿನಿಂದ ಖುಷಿ ಆಗಿದೆ ಅಂತಲ್ಲ  ಆದರೆ ನ್ಯಾಯ ಅನ್ಯಾಯದ ಪ್ರಶ್ನೆ ಅಷ್ಟೆ  ಎಂದರು.vtu

Key words: Muda case, CM Siddaramaiah, truth, Home Minister, Dr. G. Parameshwar