Saturday, September 19, 2026

BDA Apartments

ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ BDA JK_Adv BDA Adv
Home Cinema ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ನವದೆಹಲಿ,22,2025 (www.justkannada.in):  ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ಜುಲೈ 24ಕ್ಕೆ ಮುಂದೂಡಿದೆ.

ನಟ ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿರುವ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಅರ್ಜಿ ವಿಚಾರಣೆ ಇಂದು ಸುಪ್ರೀಂಕೋರ್ಟ್ ನಲ್ಲಿ ನಡೆಯಿತು. ಆದರೆ ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಅವರು ಹಾಜರಾಗಿರಲಿಲ್ಲ.ನಟ ದರ್ಶನ್ ಜಾಮೀನು ರದ್ದು ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ supreme court

ದರ್ಶನ್ ಪರ ವಕೀಲ ಸಿದ್ದಾರ್ಥ್ ದವೆ ಅವರು ವಾದ ಮಂಡಿಸಿ, ಕಪಿಲ್ ಸಿಬಲ್ ಅವರಿಗೆ ಇಂದು ಬರಲು ಸಾಧ್ಯವಾಗಿಲ್ಲ. ಬೇರೊಂದು ಕೋರ್ಟ್ ನಲ್ಲಿ ಕಪಿಲ್ ಸಿಬಲ್ ಬ್ಯುಸಿಯಾಗಿದ್ದಾರೆ.  ಹೀಗಾಗಿ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ನಾಳೆಗೆ ಸಮಯ ನೀಡುವಂತೆ ಕೋರಿದರು

ಮನವಿ ಆಲಿಸಿದ  ಸುಪ್ರೀಂಕೋರ್ಟ್ ವಿಚಾರಣೆಯನ್ನ ಗುರುವಾರಕ್ಕೆ ಮುಂದೂಡಿಕೆ ಮಾಡಿದೆ.vtu

Key words: Hearing, actor Darshan,  bail, cancellation, petition, postponed, Supreme court