40 ಶಾಲೆಗಳಿಗೆ ಬಾಂಬ್ ಬೆದರಿಕೆ: ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಲ್ಲ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜುಲೈ,18,2025 (www.justkannada.in):  ಬೆಂಗಳೂರಿನ  40 ಶಾಲೆಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಮೇಲ್ ಮಾಡಿದ್ದು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಪರಿಶೀಲನೆ ನಡೆಸಿದ್ದಾರೆ.

ಆರ್. ಆರ್ ನಗರ ಹಾಗೂ ಕೆಂಗೇರಿ ಸೇರಿದಂತೆ ಹಲವು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯೊಡ್ಡಲಾಗಿದೆ.ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.   40 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಪತ್ರ ಬಂದಿದ್ದು, ಮಕ್ಕಳ ಬ್ಯಾಗ್ ನಲ್ಲಿ ಕಪ್ಪು ಬಣ್ಣದ ಕವರ್ ನಲ್ಲಿ ಸ್ಫೋಟಕ ಇರಿಸಿದ್ದೇನೆ, ಪ್ರಪಂಚದ ಪ್ರತಿಯೊಬ್ಬರನ್ನು ಹತ್ಯೆ ಮಾಡುತ್ತೇನೆ ಯಾರನ್ನೂ ಬಿಡುವುದಿಲ್ಲ ಎಂದು ಬರೆಯಲಾಗಿದೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಾಂಬ್ ಬೆದರಿಕೆ ಯಾಕೆ ಬಂದಿದೆ ಅಂತಾ ಪರಿಶೀಲನೆ ಮಾಡುತ್ತೇವೆ  ಈ ಹಿಂದೆಯೂ ಶಾಲೆಗಳಿಗೆ ಬಾಂಬೆ ಬೆದರಿಕೆ ಬಂದಿದೆ.  ನಾವು ಮೊದಲು ಪರಿಶೀಲನೆ ಮಾಡತ್ತೇವೆ. ಯಾವುದನ್ನೂ ಕೂಡ ಲಘುವಾಗಿ ತೆಗೆದುಕೊಳ್ಳಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಸಭಾಪತಿ ಬಸವರಾಜ ಹೊರಟ್ಟಿ,  ಬಾಂಬ್ ಬೆದರಿಕೆ ನಿರಂತರವಾಗಿ ಬರುತ್ತಿದೆ. ಈ ರೀತಿ ಕರೆಗಳು ಬರುತ್ತಿವೆ . ಹೀಗಾಗಿ ಈ ರೀತಿ ಆಗದಂತೆ ರಾಜ್ಯ ಸರ್ಕಾರ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.vtu

Key words: Bomb threat, 40 schools, Minister, Parameshwar