ತವರು ಕ್ಷೇತ್ರಕ್ಕೆ ಬಂಪರ್ ಯೋಜನೆ ; ಸಿದ್ದರಾಮಯ್ಯ ರಿಂದ ಚಾಲನೆ.

ಮೈಸೂರು,ಜುಲೈ,18,2025 (www.justkannada.in): ಮೈಸೂರು ನಗರ ಜನತೆಯ ಹಲವಾರು ದಿನಗಳ ಬೇಡಿಕೆ ಕಡೆಗೂ ಈಡೇರುತ್ತಿದ್ದು, ನಾಳೆ ಮೈಸೂರು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿನ ವಿವಿಧ ಇಲಾಖೆಗಳ 2578.03  ಕೋಟಿ ಮೌಲ್ಯದ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ  ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.

ನಾಳೆ ಮೈಸೂರು ಪ್ರವಾಸ ಕೈಗೊಳ್ಳಲಿರುವ ಸಿಎಂ ಸಿದ್ದರಾಮಯ್ಯ ನಡೆಯಲಿರುವ ಕಾರ್ಯಕ್ರಮಗಳಲ್ಲಿ  ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಇಲಾಖೆಗಳ 2578.03  ಕೋಟಿ ಮೌಲ್ಯದ ಕಾಮಗಾರಿಗಳಿಗೆ  ಶಂಕುಸ್ಥಾಪನೆ ನೆರವೇರಿಸಲಿದ್ದುಈ ಕಾಮಗಾರಿಗಳ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

1.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮ ನಿಯಮಿತ: ಕಾಮಗಾರಿ ಮೊತ್ತ ರೂ 192.99 ಕೋಟಿ

192 ಕೋಟಿ ರೂ. ಮೊತ್ತದ ಯುನಿಟಿ ಮಾಲ್ ನಿರ್ಮಾಣಕ್ಕೆ ನಾಳೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

2.ಕೆಎಸ್ ಆರ್ ಟಿಸಿ ಕಾಮಗಾರಿ- ಶಂಕುಸ್ಥಾಪನೆ:  ಮೊತ್ತ 120 ಕೋಟಿ ರೂ.

ನರಸಿಂಹ ರಾಜ ಕ್ಷೇತ್ರ ವ್ಯಾಪ್ತಿಯ ಬನ್ನಿಮಂಟಪದಲ್ಲಿ 120 ಕೋಟಿ ರೂ.  ನೂತನ ಮಾದರಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ

3.ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ : ರೂ 23.59 ಕೋಟಿ ರೂ.

ಕೆಆರ್ ಕ್ಷೇತ್ರ ವ್ಯಾಪ್ತಿಯ ಕರ್ನಾಟಕ ವಸ್ತುಪ್ರಾಧಿಕಾರದ ಆವರಣದಲ್ಲಿರುವ ಇ-ಬ್ಲಾಕ್ ಅಭಿವೃದ್ದಿ,  ನೀರಿನ ಕಾರಂಜಿ ಅಭಿವೃದ್ದಿ, ಹಾಗೂ Foating Dragon boating pond ಕಾಮಗಾರಿಗೆ ಶಂಕು ಸ್ತಾಪನೆ ನೆರವೇರಲಿದೆ.

4.ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ:  ರೂ. 408 ಕೋಟಿ ರೂ

ಕೆಆರ್ ಕ್ಷೇತ್ರ, ಚಾಮರಾಜ, ಚಾಮುಂಡೇಶ್ವರಿ ನರಸಿಂಹ ರಾಜ ಕ್ಷೇತ್ರದಲ್ಲಿ ಒಟ್ಟು 408 ಕೋಟಿ ರೂ ವೆಚ್ಚದಲ್ಲಿ 11 ಕೆ.ವಿ ಓವರ್ ಹೆಡ್ ವಿದ್ಯುತ್ ಮಾರ್ಗವನ್ನ ಭೂಗತ ಕೇಬಲ್ ನಿಂದ ಬದಲಾಯಿಸುವುದು. ಎಲ್ ಟಿ ಓವರ್ ಹೆಡ್ ವಿದ್ಯುತ್ ಮಾರ್ಗವನ್ನ ಏರಿಯಲ್ ಬಂಚ್ ಕೇಬಲ್ ನಿಂದ ಬದಲಾಯಿಸುವುದು.

5.ಲೋಕೋಪಯೋಗಿ ಇಲಾಖೆ ವಿವಿಧ ಕಾಮಗಾರಿ ಉದ್ಘಾಟನೆ ಶಂಕುಸ್ಥಾಪನೆ:  502.41 ಕೋಟಿ ರೂ.

6.ಮೈಸೂರು ಮಹಾನಗರ ಪಾಲಿಕೆ: ವಿವಿಧ ಕಾಮಗಾರಿ ಉದ್ಘಾಟನೆ ಶಂಕುಸ್ಥಾಪನೆ:   380 ಕೋಟಿ ರೂ.

ಮೆಟಿರಿಯಲ್ ರಿಕವರಿ ಫೆಸಲಿಟಿ, ಟ್ರಾನ್ಸ್ ಫರ್ ಸ್ಟೇಷನ್ , ಕಟ್ಟಡ ಹಾಗೂ ಭಗ್ನಾವಸೇಶ ತ್ಯಾಜ್ಯ  ಸಿವಿಲ್ ಕಾಮಗಾರಿಗಳು ನೀರು ಸರಬರಾಜು ಮತ್ತು ಒಳ ಚರಂಡಿಗೆ ಸಂಬಂಧಿಸಿದ ಕಾಮಗಾರಿಗಳ ಸುಮಾರು 380 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ

7.ಕಾರ್ಮಿಕ ಇಲಾಖೆ: 23.59 ಕೋಟಿ ರೂ.

ಕೆಆರ್ ಕ್ಷೇತ್ರದ ವ್ಯಾಪ್ತಿಯಲ್ಲಿ 23.59 ಕೋಟಿ ರೂ ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

8.ಜಲಸಂಪನ್ಮೂಲ ಇಲಾಖೆ:  419.86 ಕೋಟಿ ರೂ.

9.ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ: 3.50 ಕೋಟಿ ರೂ.

ನರಸಿಂಹ ರಾಜ ಕ್ಷೇತ್ರದಲ್ಲಿ 3.50 ಕೋಟಿ ರೂ. ವೆಚ್ಚದಲ್ಲಿಕ್ರೀಡಾ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ

10.ಆರೋಗ್ಯ ಮತ್ತು ಕುಟುಂಬ ಕಲ್ಯಾಣ  ಇಲಾಖೆ:  55.50 ಕೋಟಿ ರೂ.

ಚಾಮರಾಜ ಕ್ಷೇತ್ರ ವ್ಯಾಪ್ತಿಯಲ್ಲಿ 50  ಕೋಟಿ.ರೂ ವೆಚ್ಚದಲ್ಲಿ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಫೆರಿಫೆರಲ್  ಕ್ಯಾನ್ಸರ್ ಕೇಂದ್ರ ನಿರ್ಮಾಣ, 50 ಕೋಟಿ. ರೂ ವೆಚ್ಚದಲ್ಲಿ ಎಂಡೋಕ್ರೋನಾಲಜಿ ಕೇಂದ್ರ,  75 ಕೋಟಿ ರೂ.ವೆಚ್ಚದಲ್ಲಿ ಮೂತ್ರಪಿಂಡ ಶಾಸ್ತ್ರ ಮತ್ತು ಮೂತ್ರ ಶಾಸ್ತ್ರ ಕಟ್ಟದ ನಿರ್ಮಾಣ ಕಾಮಗಾರಿಗೆ  ಶಂಕುಸ್ಥಾಪನೆ,

11.ಕೆಪಿಟಿಸಿಎಲ್: ರೂ. 38 .73 ಕೋಟಿ ರೂ.

12.ಸಮಾಜ ಕಲ್ಯಾಣ ಇಲಾಖೆ: 26.35 ಕೋಟಿ ರೂ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ  9.24 ಕೋಟಿ ರೂ ವೆಚ್ಚದ ಡಾ.ಬಿ.ಆರ್ ಅಂಬೇಡರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ(ಬೋಗಾದಿ), 9.31 ಕೋಟಿ ರೂ. ಡಾ.ಬಿ.ಆರ್ ಅಂಬೇಡ್ಕರ್ ಸ್ನಾತಕೋತ್ತರ ಬಾಲಕರ ವಿದ್ಯಾರ್ಥಿನಿಲಯ( ವಿಶ್ವೇಶ್ವರ ನಗರ ) ನಿರ್ಮಾಣಕ್ಕೆ ಶಂಕುಸ್ಥಾಪನೆ,  ಹುಣಸೂರಿನಲ್ಲಿ 2.25 ಕೋಟಿ ರೂ ವೆಚ್ಚದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಸೇರಿ ಒಟ್ಟು 26.35 ಕೋಟಿ ಕಾಮಗಾರಿ ಉದ್ಘಾಟನೆಯಾಗಲಿದೆ.

13.ಕನ್ನಡ ಸಂಸ್ಕೃತಿ ಇಲಾಖೆ : 14.63 ಕೋಟಿ ರೂ.

14.ಸಣ್ಣ ನೀರಾವರಿ ಇಲಾಖೆ : 13.00 ಕೋಟಿ ರೂ.

15.ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ:  10.80 ಕೋಟಿ ರೂ.

16.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ: 3.00 ಕೋಟಿ ರೂ.

3 ಕೋಟಿ ರೂ. ವೆಚ್ಚದಲ್ಲಿ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕ್ಯಾತಮಾರನಹಳ್ಳಿ ಸ.ನಂ.196ರ ಜಮೀನಿನ 1 ಎಕರೆ ಜಾಗದಲ್ಲಿ ಗಾಂಧಿ ಭವನ ನಿರ್ಮಾಣ ಕಾಮಗಾರಿ.

17.ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ: 1.50 ಕೋಟಿ ರೂ.

18.ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ: 1.00 ಕೋಟಿ ರೂ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ 1 ಕೋಟಿ ರೂ ವೆಚ್ಚದಲ್ಲಿ ಅರಸು ಭವನ ಕಟ್ಟಡ, ನಿಗಮದ ಕಟ್ಟಡ ಮತ್ತು ಸಭಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ.

19. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: 80.84 ಕೋಟಿ ರೂ.

20. ಪಶುಸಂಗೋಪನೆ ಇಲಾಖೆ: 0.50 ಕೋಟಿ ರೂ.

21. ರೇಷ್ಮೆ ಇಲಾಖೆ:  0.50 ಕೋಟಿ ರೂ.

ಮೈಸೂರಿನ ಕೆಆರ್ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮೀಪುರಂ ವ್ಯಾಪ್ತಿಯ ರೇಷ್ಮೆ  ಇಲಾಖೆಯ ನೂತನ ಸಭಾಂಗಣ ಕಾಮಗಾರಿ ಉದ್ಘಾಟನೆ.

22. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ: 0.50 ಕೋಟಿ ರೂ.

23. ಜಿಲ್ಲಾ ನಗರಾಭಿವೃದ್ದಿ ಇಲಾಖೆ: 163.78 ಕೋಟಿ ರೂ.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹೂಟಗಳ್ಳಿ ನಗರಸಭೆ ನೂತನ ಕಚೇರಿ ಕಟ್ಟಡದ ನಿರ್ಮಾಣ ಕಾಮಗಾರಿ 9.98 ಕೋಟಿ ರೂ ವೆಚ್ಚ.  57.69 ಕೋಟಿ ರೂ ವೆಚ್ಚದಲ್ಲಿ ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ NGT/SBM2(U) ಅನುದಾನದಡಿಯಲ್ಲಿ STP ಘಟಕ ನಿರ್ಮಾಣ ಮತ್ತು ಒಳಚರಂಡಿ ಪೈಪ್ ಲೈನ್ ಕಾಮಗಾರಿ ಸೇರಿ ಒಟ್ಟು 163.78 ಕೋಟಿ ರೂ.  ಅಂದಾಜು ಮೊತ್ತದ ಕಾಮಗಾರಿಗೆ ನಾಳೆ ಶಂಕುಸ್ಥಾಪನೆಯನ್ನ ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

24. ವೈದ್ಯಕೀಯ ಶಿಕ್ಷಣ ಇಲಾಖೆ: 175.50 ಕೋಟಿ ರೂ.

vtu

key words: Mysore District, project, CM, Siddaramaiah, launch