ಇದು ಹೈಕಮಾಂಡ್ ಗೆ ಬೆದರಿಸುವ ಬ್ಲ್ಯಾಕ್ ಮೇಲ್ ಸಮಾವೇಶ- ಬಿವೈ ವಿಜಯೇಂದ್ರ ಟೀಕೆ

ಮೈಸೂರು,ಜುಲೈ,18,2025 (www.justkannada.in):  ಮೈಸೂರಿನಲ್ಲಿ ಕಾಂಗ್ರೆಸ್  ಮತ್ತು ಸಿಎಂ ಸಿದ್ದರಾಮಯ್ಯ ನಾಳೆ ಮೈಸೂರಿನಲ್ಲಿ  ಮಾಡಲು ಹೊರಟಿರುವ ಸಮಾವೇಶ ಬ್ಲ್ಯಾಕ್ ಮೇಲ್ ಸಮಾವೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸಿಎಂ  ಸ್ಥಾನ ಅಲ್ಲಾಡುವ  ವೇಳೆ ಈ ರೀತಿ ಸಮಾವೇಶ ಮಾಡುತ್ತಾರೆ.  ಸಮಾವೇಶ ಮೂಲಕ ಕಾಂಗ್ರೆಸ್ ಹೈಕಮಾಂಡ್ ಬೆದರಿಸುವ ತಂತ್ರ.  ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಭೇಟಿಯಾಗಲು ಸಮಯವೇ ಸಿಕ್ಕಿಲ್ಲ.  ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾಗಲು ರಾಹುಲ್ ಗಾಂಧಿ ಸಮಯ ಕೂಡ ಕೊಟ್ಟಿಲ್ಲ. ಹೀಗಾಗಿ ಸವಾಲು ಹಾಕಲು ಸಾಧನ ಸಮಾವೇಶ ಮಾಡುತ್ತಿದ್ದಾರೆ.  ಇದು ಸಾಧನಾ ಸಮಾವೇಶ ಅಲ್ಲ  ಬ್ಲ್ಯಾಕ್ ಮೇಲ್ ಸಮಾವೇಶ.  ಹೈಕಮಾಂಡ್ ಗೆ ಬ್ಲ್ಯಾಕ್ ಮೇಲ್ ಮಾಡಲು  ಮಾಡುತ್ತಿರುವ ಸಮಾವೇಶ ಎಂದು ಲೇವಡಿ ಮಾಡಿದರು.

ಏನು ಕಡಿದು ಕಟ್ಟೆಹಾಕಿದ್ದಾರೆ  ಎಂದು ಸಮಾವೇಶ ಮಾಡುತ್ತಿದ್ದಾರೆ.  ಮುಡಾ ಹಗರಣ ವೇಳೆಯೂ ಮೈಸೂರಿನಲ್ಲಿ ಸಮಾವೇಶ ಮಾಡಿದರು. ಕುರ್ಚಿಗೆ ಕಂಟಕ ಬಂದಾಗ ಅಹಿಂದ ಸಮುದಾಯ ನೆನಪಾಗುತ್ತದೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.vtu

Key words: blackmail conference, Congress, high command, BY Vijayendra