ಕ್ಯಾಲಿಫೋರ್ನಿಯಾ,ಜುಲೈ,15,2025 (www.justkannada.in): ಬಾಹ್ಯಾಕಾಶಯಾನ ಕೈಗೊಂಡಿದ್ದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಇದೀಗ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ದಿಂದ ಭೂಮಿಗೆ ಯಶಸ್ವಿಯಾಗಿ ಬಂದಿಳಿದಿದ್ದಾರೆ.
ಶುಭಾಂಶು ಶುಕ್ಲಾ 18 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದು ಇದೀಗ ಹಿಂದಿರುಗಿದ್ದು, ಎಲ್ಲೆಡೆ ಸಂತಸ ಮನೆ ಮಾಡಿದೆ. ಜುಲೈ 14 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟ ನಂತರ ತಂಡವು ಈಗ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕರಾವಳಿಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಸ್ಪ್ಲಾಶ್ಡೌನ್ ಮಾಡಿದೆ.
ಭಾರತೀಯ ಗ್ರೂಪ್ ಕ್ಯಾ. ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್ ನ ಮಿಷನ್ ಸ್ಪೆಷಲಿಸ್ಟ್ ಸ್ಲಾವೋಸ್ಜ್ ಉಜ್ನಾನ್ಸ್ಕಿ, ಹಂಗೇರಿಯಾದ ಗಗನಯಾನಿ ಟಿಬೋರ್ ಕಾಪು ಅವರು ಭೂಮಿ ಮೇಲೆ ಲ್ಯಾಂಡ್ ಆಗಿದ್ದಾರೆ. ಆಯಕ್ಸಿಯಮ್ ಯೋಜನೆ ಸಕ್ಸಸ್ ಆಗಿದ್ದು, ಯಶಸ್ವಿಯಾಗಿ ಗಗನಯಾನಿಗಳು ಭೂಮಿಗೆ ಆಗಮಿಸಿದ್ದಾರೆ.
18 ದಿನಗಳ ಬಾಹ್ಯಾಕಾಶ ಯಾನ ಮುಗಿಸಿ ಭಾರತೀಯ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳು ಭೂಮಿಗೆ ಬಂದಿಳಿದಿದ್ದಾರೆ. ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಕ್ಯಾಲಿಫೋರ್ನಿಯಾದ ಕರಾವಳಿ ಪ್ರದೇಶಕ್ಕೆ ನೌಕೆ ಬಂದಿಳಿದಿದೆ. ಈ ಖುಷಿ ಕ್ಷಣವನ್ನು ಶುಭಾಂಶು ಶುಕ್ಲಾ ಪೋಷಕರು ಕಣ್ತುಂಬಿಕೊಂಡಿದ್ದು ಭಾವುಕರಾದರು.
Key words: Axium-4, successful, landing, Shubanshu Shukla, lands , Earth