ಚಾಮರಾಜನಗರ, ಜುಲೈ,15,2025 (www.justkannada.in): ಚಾಮರಾಜನಗರ ಮಲೆ ಮಹದೇವಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ಡಿಸಿಎಫ್ ಚಕ್ರಪಾಣಿ ಅವರನ್ನ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮಲೆಮಹದೇಶ್ವರ ಬೆಟ್ಟದ ವನ್ಯ ಜೀವಿಧಾಮದಲ್ಲಿ ನಡೆದಿದ್ದ 5 ಹುಲಿ ಸಾವು ಪ್ರಕರಣ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು. ಸತ್ತಹಸುವಿಗೆ ವಿಷಪ್ರಾಶನ ಮಾಡಿದ್ದವರು ಈಗಾಗಲೇ ಜೈಲು ಪಾಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ವಿಷ ಪ್ರಾಶನದಿಂದಲೇ ಐದು ಹುಲಿಗಳು ಸಾವು ಎಂಬ ವರದಿ ಬಹಿರಂಗವಾಗಿದೆ.
ಇದೀಗ ಪ್ರಕರಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ ಐಎಫ್‌ಎಸ್ ಅಧಿಕಾರಿ ಚಕ್ರಪಾಣಿ ಅವರನ್ನ ಅಮಾನತು ಮಾಡಲಾಗಿದೆ. ಚಕ್ರಪಾಣಿ ಅವರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಆಗಿದ್ದರು. ಈ ಹಿಂದೆ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಚಕ್ರಪಾಣಿ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.
Key words: DCF, suspended, five tigers, death, Chamarajanagar