ಮೈಸೂರು,ಜುಲೈ,15,2025 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಒಂದುವರೆ ತಿಂಗಳು ಬಾಕಿ ಇದ್ದು, ಈಗಾಗಲೇ ಅರಣ್ಯ ಇಲಾಖೆ ಗಜಪಡೆಯ ಆಯ್ಕೆ ಪ್ರಕ್ರಿಯೆ ಶುರು ಮಾಡಿದೆ. ಈ ಮಧ್ಯೆ ಈ ಬಾರಿಯೂ ಅಭಿಮನ್ಯು ಅಂಬಾರಿ ಹೊರಲಿದ್ದಾನೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.
ಅಭಿಮನ್ಯು ಆನೆಗೆ 59 ವರ್ಷ ವಯಸ್ಸಾಗಿದ್ದು, ಮುಂದಿನ ವರ್ಷವೂ ಅಂಬಾರಿ ಹೊರುವ ಸಾಧ್ಯತೆ ಇದೆ. ಈ ಮಧ್ಯೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ಮಾರ್ಗಸೂಚಿ ಪ್ರಕಾರ 60 ವರ್ಷದ ಮೇಲೆ ಆನೆಗಳಿಗೆ ಭಾರ ಹೊರಿಸಬಾರದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಅಭಿಮನ್ಯು ಆನೆಗೆ 59 ವರ್ಷ ವಯಸ್ಸಾಗಿದ್ದು ಅಂಬಾರಿ ಹೊರುವುದು ಈ ಬಾರಿ ಕಡೆನಾ ಅಥವಾ ಮುಂದಿನ ಬಾರಿಯೂ ಅಂಬಾರಿ ಹೊರತ್ತಾನೆಯೇ ಎಂಬುದನ್ನ ಕಾದು ನೋಡಬೇಕಿದೆ.
ಈ ಕುರಿತು ಮಾತನಾಡಿರುವ ಡಿಸಿಎಫ್ ಪ್ರಭುಗೌಡ. ಈ ಬಾರಿಯೂ ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಅಭಿಮನ್ಯುಗೆ ಈಗ 59 ವರ್ಷ ವಯಸ್ಸಾಗಿದ್ದು, ಫುಲ್ ಫಿಟ್ ಅಂಡ್ ಫೈನ್ ಆಗಿದ್ದಾನೆ. ಹೀಗಾಗಿ ಈ ಬಾರಿಯೂ ಆತನೇ ಗಜಪಡೆ ಲೀಡ್ ಮಾಡುತ್ತಾನೆ. ಅವನ ನಂತರದಲ್ಲಿ ಮಹೇಂದ್ರ, ಧನಂಜಯ, ಹೀಗೆ ಅನೇಕ ಆನೆಗಳಿವೆ. ಏಕಲವ್ಯ ಕೂಡ ಕ್ಯೂಂಬಿಂಗ್ ನಲ್ಲಿ ಹೆದರದೆ ಭಾಗಿಯಾಗುತ್ತಿದ್ದಾನೆ. ಆತನು ಕೂಡ ಭವಿಷ್ಯದಲ್ಲಿ ಒಳ್ಳೆಯ ಕುಮ್ಕಿ ಆನೆಯಾಗುತ್ತಾನೆ. ಮುಂದಿನ ವಾರ ಗಜಪಡೆಯ ಲಿಸ್ಟ್ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆ ಗಜಪಡೆಯ ಆಯ್ಕೆ ಪ್ರಕ್ರಿಯೆ ಶುರು ಮಾಡಿದ್ದು, ಹೆಣ್ಣಾನೆಗಳಿಗೆ ಪ್ರಗ್ನೆನ್ಸಿ ಟೆಸ್ಟ್ ಕೂಡ ಮಾಡಿಸಲಾಗಿದೆ. ಈ ಬಾರಿ ಕುಮ್ಕಿ ಆನೆ ಸೇರಿ ಆರು ಹೆಣ್ಣಾನೆಗಳು ಬರಲಿವೆ. ಆನೆಗಳ ಹೆಲ್ತ್ ಕಾರ್ಡ್ ದಸರಾ ಹೈ ಪವರ್ ಕಮಿಟಿಗೆ ಸಲ್ಲಿಕೆಯಾಗಲಿದೆ. ಯಾವೆಲ್ಲ ಆನೆಗಳು ಈ ಬಾರಿ ದಸರಾದಲ್ಲಿ ಭಾಗಿಯಾಗತ್ತೆ ಅನ್ನೋ ಅಂತಿಮ ಪಟ್ಟಿ ಹೈ ಪವರ್ ಕಮಿಟಿ ಬಿಡುಗಡೆ ಮಾಡತ್ತದೆ. ಮತ್ತಿಗೂಡು, ದುಬಾರೆ, ಬಳ್ಳೆ, ಸೇರಿದಂತೆ 6 ಕ್ಯಾಂಪ್ ನಿಂದ ಆನೆಗಳು ಬರಲಿವೆ. ಕಳೆದ ಬಾರಿ ಏಕಲವ್ಯ ಹೊಸ ಆನೆಯಾಗಿ ಬಂದಿತ್ತು. ಆಗಸ್ಟ್ 4 ರಂದು ಗಜಪಡೆ ಮೈಸೂರಿಗೆ ಆಗಮಿಸಲಿವೆ ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.
Key words: Mysore Dasara, Abhimanyu, Ambari