ಬೆಂಗಳೂರು,ಜುಲೈ,14,2025 (www.justkannada.in): ವಯೋಸಹಜ ಖಾಯಿಲೆಯಿಂದ ಇಂದು ನಿಧನರಾದ ಬಹುಭಾಷಾ ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಅಂತ್ಯಕ್ರಿಯೆ ನಾಳೆ ಅವರ ಹುಟ್ಟೂರಿನಲ್ಲಿ ನಡೆಯಲಿದೆ.
ನಾಳೆ ಬೆಳಿಗ್ಗೆ 11.30ಕ್ಕೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ದಶವಾರದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಬಿ. ಸರೋಜಾ ದೇವಿ ಅವರ ಅಂತ್ಯಕ್ರಿಯೆ ನೆರವೇರಲಿದೆ. ಅಲ್ಲಿವರೆಗೂ ಮಲ್ಲೇಶ್ವರಂ ನಿವಾಸದಲ್ಲಿ ಸರೋಜಾ ದೇವಿ ಅವರ ಪಾರ್ಥೀವ ಶರೀರವನ್ನ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ ಎಂದು ಪುತ್ರ ಗೌತಮ್ ಮಾಹಿತಿ ನೀಡಿದ್ದಾರೆ.
ಇನ್ನು ರಾಜಕೀಯ ನಾಯಕರು, ಕಲಾವಿದರು ಸೇರಿ ಗಣ್ಯಾತೀಗಣ್ಯರು ನಿವಾಸಕ್ಕೆ ಆಗಮಿಸಿ ಹಿರಿಯ ನಟಿ ಬಿ.ಸರೋಜಾ ದೇವಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
Key words: Veteran actress, B. Saroja Devi, funeral, tomorrow