ಮೈಸೂರು,ಜುಲೈ,14,2025 (www.justkannada.in): ರಾಜ್ಯ ಮಟ್ಟದ ಈಜು ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ರುತ್ವಾ ಹಾಗೂ ಕೃತಿಕ್ ವೇದೇಶ್ ಇಬ್ಬರು ಪ್ರತಿಭೆಗಳು ಶ್ರೇಷ್ಠ ಹಾಗೂ ಆಕರ್ಷಕ ಪ್ರದರ್ಶನ ನೀಡಿ, ರಾಷ್ಟ್ರೀಯ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್ ನಲ್ಲಿ ಜು.9ರಿಂದ 13ರವರೆಗೆ ನಡೆದ ಕರ್ನಾಟಕ ಈಜು ಸಂಘ (KSA) ಆಯೋಜಿತ ಎನ್ ಆರ್‌ಜೆ ರಾಜ್ಯ ಉಪ-ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್ ಶಿಪ್ ನಲ್ಲಿ ಮೈಸೂರಿನ ಜೆ.ಪಿ.ನಗರದ ಗ್ಲೋಬಲ್ ಸ್ಪೋಟ್ಸ್೯ ಅಸೋಸಿಯೇಷನ್ ನ ಈಜುಪಟುಗಳು ತಮ್ಮ ಉತ್ತಮ ಕೌಶಲ್ಯದೊಂದಿಗೆ, ಆಕರ್ಷಕ ಪ್ರದರ್ಶನ ನೀಡಿದ್ದಾರೆ.
ಐದು ದಿನಗಳ ಕಾಲ ನಡೆದ ಈ ಸ್ಪರ್ಧೆಯಲ್ಲಿ ರುತ್ವಾ. ಎಸ್ 2 ಚಿನ್ನ ಹಾಗೂ 2 ಕಂಚಿನ ಪದಕ ಹಾಗೂ ಕೃತಿಕ್ ವೇದೇಶ್ 1 ಬೆಳ್ಳಿ ಪದಕ ಪಡೆಯುವುದರೊಂದಿಗೆ ಜಿಎಸ್ಎ ತಂಡ ಒಟ್ಟು ಐದು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಸಾಧನೆಯ ಹಿಂದೆ ತರಬೇತಿ ಸಿಬ್ಬಂದಿಯ ಶ್ರಮವೂ ಮಹತ್ವಪೂರ್ಣವಾಗಿದೆ.
“ಈಜಿನಲ್ಲಿ ನಾವು ಸಾಧನೆ ಮಾತ್ರವಲ್ಲ, ಇತಿಹಾಸವನ್ನೂ ನಿರ್ಮಿಸುತ್ತಾ ,ಮುಂದಿನ ಮಟ್ಟದ ಸ್ಪರ್ಧೆಗಳತ್ತ ಹೆಜ್ಜೆ ಇಡುತ್ತಿದ್ದೇವೆ ” ಎಂದು ಜಿಎಸ್ಎ ಮುಖ್ಯ ತರಬೇತುದಾರ ಪವನ್ ಕುಮಾರ್ ತಮ್ಮ ಈಜುಗಾರರ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ರುತ್ವಾ ಎಸ್: 200 ಮೀ. ಬಟರ್ ಫ್ಲೈ (2:39:62), 100 ಮೀ. ಬಟರ್ ಫ್ಲೈ (1:11:06) 2 ಚಿನ್ನದ ಪದಕ. 200 ಮೀ. ಫ್ರೀ ಸ್ಟೈಲ್ ನಲ್ಲಿ (2:25:39), 100 ಮೀ. ಫ್ರೀ ಸ್ಟೈಲ್ ನಲ್ಲಿ (1:08:10) 2 ಕಂಚಿನ ಪದಕ ಪಡೆದಿದ್ದು, ಇವರ ಈಜು ಶೈಲಿ ಸ್ಪರ್ಧೆಯ ಆಕರ್ಷಣೆಯಾಗಿತ್ತು.
ಕೃತಿಕ್ ವೇದೇಶ್: 200ಮೀ. ಬಟರ್ ಫ್ಲೈನಲ್ಲಿ(2:45:04) ಬೆಳ್ಳಿ ಪದಕ ಪಡೆದಿದ್ದಾರೆ. ಇವರ ಸಾಧನೆಗೆ ಪೋಷಕರು, ಕೋಚ್ ಗಳು ಮತ್ತು ಸಹ ಈಜುಗಾರರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Key words: State, Swimming Championships, Mysore, boys, 5 medals