ಚಿಕ್ಕಮಗಳೂರು,ಜುಲೈ,12,2025 (www.justkannada.in): ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ನೇರವಾಗಿ ಹೇಳಿದ್ದು, ಇದು ಶಾಲಿನಲ್ಲಿ ಸುತ್ತಿಕೊಂಡು ಹೊಡೆದ ರೀತಿಯಲ್ಲ, ಡೈರೆಕ್ಟ ಆಗಿ ಹೊಡೆದಂತಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, 136 ಶಾಸಕರು ಅವರ ಅಧ್ಯಕ್ಷತೆಯಲ್ಲಿಯೇ ಗೆದ್ದಿದ್ದು. ಆದರೆ ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ಈ ರೀತಿ ಅವಮಾನ ಮಾಡಿಸಿಕೊಂಡು ಡಿ.ಕೆ.ಶಿವಕುಮಾರ್ ಸುಮ್ಮನೆ ಹೇಗೆ ಇರ್ತಾರೆ? ಎಂದು ಳೇವಡಿ ಮಾಡಿದರು.
ಇದು ಶಾಲಿನಲ್ಲಿ ಸುತ್ತಿಕೊಂಡು ಹೊಡೆದ ರೀತಿಯಲ್ಲ, ಡೈರೆಕ್ಟ ಆಗಿ ಹೊಡೆದಂತಿದೆ. ಇಂತಹ ಮಾತುಗಳನ್ನು ಡಿ.ಕೆ.ಶಿವಕುಮಾರ್ ಸಹಿಸಿಕೊಂಡರೆ ಅವರ ವ್ಯಕ್ತಿತ್ವಕ್ಕೇ ಅಪಚಾರ ಎಂದು ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ.
Key words: CM Siddaramaiah, statement, DK Shivakumar, CT Ravi