ಸದ್ಯದ ಸ್ಥಿತಿಯಲ್ಲಿ ಶಾಸಕರ ಬೆಂಬಲ ಕೇಳೋದು ಸರಿಯಲ್ಲ- ಡಿ.ಕೆ ಸುರೇಶ್

ಬೆಂಗಳೂರು,ಜುಲೈ,12,2025 (www.justkannada.in): ಡಿಸಿಎಂ ಡಿಕೆ ಶಿವಕುಮಾರ್ ಗೆ ಕೆಲವು ಶಾಸಕರ ಬೆಂಬಲ ಇದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಬಮೂಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ ಸುರೇಶ್, ಸದ್ಯದ ಸ್ಥಿತಿಯಲ್ಲಿ ಶಾಸಕರ ಬೆಂಬಲ ಕೇಳೋದು ಸರಿಯಲ್ಲ ಎಂದಿದ್ದಾರೆ.

ಐದು ವರ್ಷ ಸಿಎಂ ಬದಲಾವಣೆ ಇಲ್ಲ.  2028ರಲ್ಲೂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎಂಬ ಹೇಳಿಕೆ ಕುರಿತು ಮಾತನಾಡಿದ ಡಿ.ಕೆ ಸುರೇಶ್, ರಾಜಕಾರಣದಲ್ಲಿ ನಿವೃತ್ತಿ ಅನ್ನೋ ವಿಚಾರವೇ ಇಲ್ಲ.   ಡಿಕೆ ಶಿವಕುಮಾರ್ ಸದ್ಯ ಕೆಪಿಸಿಸಿ ಅಧ್ಯಕ್ಷರು ಆಗಿದ್ದಾರೆ. ಸದ್ಯದ ಸ್ಥಿತಿಯಲ್ಲಿ  ಶಾಸಕರ ಬೆಂಬಲ ಕೇಳೋದು ಸರಿಯಲ್ಲ ಈಗ ಸಿದ್ದರಾಮಯ್ಯ  ಸಿಎಂ ಆಗಿ ಕೆಲಸ ಮಾಡತ್ತಿದ್ದಾರೆ ಎಂದರು.

ಡಿಕೆ ಶಿವಕುಮಾರ್ ಒಬ್ಬ ಕಾರ್ಯಕರ್ತ. ಡಿಕೆ ಶಿವಕುಮಾರ್ ಬಲಾಬಲ ಪ್ರದರ್ಶಿಸುವ ವ್ಯಕ್ತಿಯಲ್ಲ. ಕಾಂಗ್ರೆಸ್ ನಲ್ಲಿ ಯಾವುದೇ ಜಗಳ ಇಲ್ಲ. ಈ ಬಗ್ಗೆ ಸಿಎಂ,  ವರಿಷ್ಠರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ.  ಆದರೂ ಯಾಕೆ ಗೊಂದಲ ಅಂತ ಅರ್ಥ ಆಗುತ್ತಿಲ್ಲ ಎಂದರು.vtu

Key words: support, MLAs, CM Sidaramaiah, D.K. Suresh