ಲಾಂಗ್, ಮಚ್ಚಿನಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆ ಸೇರಿದ್ದ ನಾಲ್ವರು ನಾಪತ್ತೆ..!

ಮೈಸೂರು,ಜುಲೈ,12,2025 (www.justkannada.in): ಮೈಸೂರಿನ ರಾಮಾನುಜ ರಸ್ತೆಯಲ್ಲಿ ದುಷ್ಕರ್ಮಿಗಳಿಂದ  ಲಾಂಗ್, ಮಚ್ಚಿನಿಂದ ಹಲ್ಲೆಗೆ ಒಳಗಾಗಿ ಕೆಆರ್ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು  ಇದೀಗ ದಿಢೀರ್ ನಾಪತ್ತೆಯಾಗಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಆಟೋದಲ್ಲಿದ್ದ ಕುಮುದಾ, ವಿಶಾಲಾಕ್ಷಿ, ರೇಣುಕಮ್ಮ, ರಾಜಣ್ಣ ಮೇಲೆ ಕಾರಿನಲ್ಲಿ ಬಂದ ವ್ಯಕ್ತಿಗಳು ಏಕಾಏಕಿ ಮಾರಣಾಂತಿಕ ಹಲ್ಲೆ  ನಡೆಸಿದ್ದರು. ನಂತರ ಹಲ್ಲೆಗೊಳಗಾದ ನಾಲ್ವರು ಕೆ.ಆರ್.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ನಾಪತ್ತೆಯಾಗಿರುವ ನಾಲ್ವರು ಮನೆಯಲ್ಲೂ ಇಲ್ಲ, ಆಸ್ಪತ್ರೆಯಲ್ಲೂ ಪತ್ತೆ ಇಲ್ಲ.

ಹಲ್ಲೆಗೊಳಗಾದವರು ಕೆ. ಆರ್ ಆಸ್ಪತ್ರೆಯಿಂದ ಏಕಾಏಕಿ  ಮೆಡಿಕಲ್ ಎಗೈನಸ್ಟ್ ಡಿಸ್ಚಾರ್ಜ್ ಆಗಿದ್ದು, ಯಾರಿಗೂ ತಿಳಿಸದೆ, ವೈದ್ಯರ ಅನುಮತಿ ಪಡೆಯದೆ ತೆರಳಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗುವಂತೆ ಆಸ್ಪತ್ರೆ ವೈದ್ಯರು ತಿಳಿಸಿದ್ದರು. ಆದರೆ ವೈದ್ಯರ ಮಾತು ನಿರ್ಲಕ್ಷಿಸಿ ರಾತ್ರಿ ಕಳೆದು ಬೆಳಗ್ಗೆಯಾಗುವಷ್ಟರಲ್ಲಿ ನಾಲ್ವರು ಸಹ ಸ್ವತಃ ಡಿಸ್ಚಾರ್ಜ್ ಆಗಿ ತೆರಳಿದ್ದಾರೆ. ಹೀಗಾಗಿ ನಾಲ್ವರ ಏಕಾಏಕಿ ನಾಪತ್ತೆಯಿಂದ ಹಲವು ಅನುಮಾನ ಹುಟ್ಟಿಕೊಂಡಿದೆ.vtu

Key words: Mysore, Assault, four people, hospitalized, missing