Mysore police: “ಚಿನ್ನದ ಪದಕ” ವೀರನಿಗೆ ಒಲಿದ ಡಾಕ್ಟರೇಟ್..!

ಮೈಸೂರು,ಜುಲೈ,11,2025 (www.justkannada.in):  ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮೈಸೂರಿನ ಹೆಡ್ ಕಾನ್ಸ್ ಟೇಬಲ್ ನಾಗೇಂದ್ರ. ಎಂ.ಡಿ  ಅವರಿಗೆ ಚೆನ್ನೈ ಗ್ಲೋಬಲ್ ಯೂನಿವರ್ಸಿಟಿ” ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ.

ಚೆನ್ನೈ ನಲ್ಲಿ ನಡೆದ ಸಮಾರಂಭದಲ್ಲಿ ನಾಗೇಂದ್ರ. ಎಂ.ಡಿ ಅವರಿಗೆ  ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಪ್ರಸ್ತುತ ನಾಗೇಂದ್ರ ಎಂ.ಡಿ ಅವರು ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಳೆಯ ಮೈಸೂರು ಭಾಗದಲ್ಲಿ ಕ್ರೀಡಾ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪಡೆದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಾಗೇಂದ್ರ ಎಂ.ಡಿ  ಅವರು 400 ಮತ್ತು 800 ಮೀಟರ್ ಓಟದಲ್ಲಿ ಸುಮಾರು 10ರಿಂದ 12 ಅಂತರಾಷ್ಟ್ರೀಯ ಮಟ್ಟದ ಪದಕಗಳನ್ನ ಪಡೆದಿದ್ದಾರೆ.

ಸರಗೂರು ತಾಲೂಕು ಮುಳ್ಳೂರು ಗ್ರಾಮದ, ಚಿನ್ನಮ್ಮ ದಾಸಯ್ಯನವರ ಕಿರಿಯ ಪುತ್ರ ನಾಗೇಂದ್ರ ಎಂ.ಡಿ ಅವರು, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸ್ವಗ್ರಾಮ ಮುಳ್ಳೂರಿನಲ್ಲಿ ನಂತರ ಪಿಯುಸಿ ವ್ಯಾಸಂಗ ಮಾಡಿದ ಇವರು ನಂಜನಗೂಡು ತಾಲೂಕಿನ ಜೆ.ಎಸ್.ಎಸ್ ಹುಲ್ಲಹಳ್ಳಿ ಕಾಲೇಜಿನಲ್ಲಿ, ತದ ನಂತರ ಬಿ.ಎ ಪದವಿಯನ್ನು ಮೈಸೂರು ಮಹಾರಾಜ ಕಾಲೇಜಿನಲ್ಲಿ ಮುಗಿಸಿದರು.  2007 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಪೊಲೀಸ್ ಪೇದೆಯಾಗಿ ನೇಮಕವಾಗಿ  ಐದು ವರ್ಷಗಳ ಕಾಲ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದರು.  ನಂತರ 2012ರಲ್ಲಿ ಮೈಸೂರಿಗೆ ವರ್ಗಾವಣೆಗೊಂಡರು.

ಎಂ.ಡಿ ನಾಗೇಂದ್ರ ಅವರಿಗೆ ಮೈಸೂರಿನ ಲಯನ್ಸ್ ಸಂಸ್ಥೆ ವತಿಯಿಂದ “ದಕ್ಷಿಣ ಕೇಸರಿ ಅವಾರ್ಡ್, ಕರ್ನಾಟಕ ರಾಜ್ಯ ಕರಾಟೆ ಅಸೋಷಿಯೇಷನ್ ವತಿಯಿಂದ “ಪದಕಗಳ ಸರದಾರ” ಪ್ರಶಸ್ತಿ, ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ” ಸೇವಾಭೂಷಣ” ಪ್ರಶಸ್ತಿ,  ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್ ವತಿಯಿಂದ ” ಜಿಲ್ಲಾರಾಜ್ಯೋತ್ಸವ” ಪ್ರಶಸ್ತಿ, ತುಮಕೂರಿನ ಮಾತೃ ಭೂಮಿ ಸೇವಾಟ್ರಸ್ಟ್ ವತಿಯಿಂದ ” ಮಾತೃಭೂಮಿ ಸೇವಾರತ್ನ” ಪ್ರಶಸ್ತಿ ಲಭಿಸಿದೆ.

ನಾಗೇಂದ್ರ ಎಂ.ಡಿ ಅವರ ಕ್ರೀಡಾ ಸಾಧನೆ ಹೀಗಿದೆ..

2017 ರ ಡಿಸೆಂಬರ್ ನಲ್ಲಿ ಬೆಂಗಳೂರು ಜಿಲ್ಲೆಯ ಹೊಸಕೋಟೆ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ. 2019 ರ ಜನವರಿ ತಿಂಗಳಿನಲ್ಲಿ ಆಂಧ್ರಪ್ರದೇಶದ ನಾಗಾರ್ಜುನ ಯೂನಿರ್ವಸಿಟಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 800 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ.

2019 ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಲೇಶಿಯಾದಲ್ಲಿ ನಡೆದ ಏಶಿಯನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ.

2020 ರ ನವೆಂಬರ್ ನಲ್ಲಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಹಾಗೂ 200 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 4+400 ಮೀ ಓಟದ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ.

2021 ರ ಫೆಬ್ರವರಿ ತಿಂಗಳಿನಲ್ಲಿ ಗುಜರಾತ್ ನ ವಡೋದರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 200 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ, 4+400 ಮೀ ಓಟದ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ.

2022 ರ ಮೇ ತಿಂಗಳಿನಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 200 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 100 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ, 4+400 ಮೀ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ.

2022 ರ ನವೆಂಬರ್ ತಿಂಗಳಿನಲ್ಲಿ ನೇಪಾಳದ ಪೋಕ್ರಾ ಸ್ಟೇಡಿಯಂ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್‌ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ, 200 ಮೀ ಓಟದ ಸರ್ಧೆಯಲ್ಲಿ ಚಿನ್ನದ ಪದಕ, 100 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ.

2022 ರ ಡಿಸೆಂಬರ್ ತಿಂಗಳಿನಲ್ಲಿ ಉಡುಪಿಯಲ್ಲಿ ನಡೆದ ಸೌತ್ ಇಂಡಿಯಾ ನ್ಯಾಷನಲ್ ನ 100 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 200 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ, 400 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ,

2023 ರಲ್ಲಿ ನಡೆದ ಮಲೇಷಿಯಾದ ಕೌಲಾಲಾಂಪುರದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 800 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ, ದಿನಾಂಕ 08.11.2023 ರಿಂದ ದಿನಾಂಕ 12.11.2023 ರ ವರೆಗೆ ಪಿಲಿಫೈನ್ಸ್ ನಲ್ಲಿ ನಡೆದ ಏಶಿಯಾನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ.

ದಿನಾಂಕ 21.02.2024 ರಿಂದ ದಿನಾಂಕ 25.02.2024 ರ ವರೆಗೆ ಥೈಲೆಂಡ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ. 800 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ.

ದಿನಾಂಕ 15.06.2024 ರಿಂದ ದಿನಾಂಕ 16.06.2024 ರ ವರೆಗೆ ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 400 ಮೀ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ. 800 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ.

ದಿನಾಂಕ 25.10.2024 ರಿಂದ ದಿನಾಂಕ 27.10.2024 ರ ವರೆಗೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದ ನಡೆದ ರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದ 800 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಹಾಗೂ 400 ಮೀ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ, 4+400 ಮೀ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ.vtu

key words: Mysore police, Nagendra MD, honorary doctorate , Chennai Global University