ಕೆಲವೇ ಶಾಸಕರ ಬೆಂಬಲ: ಸಿಎಂ ಹೇಳಿಕೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಏನು..?

ಬೆಂಗಳೂರು,ಜುಲೈ,11,2025 (www.justkannada.in): ಕೆಲವೇ ಶಾಸಕರ ಬೆಂಬಲ ಡಿಕೆ ಶಿವಕುಮಾರ್ ಗಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಇಂದು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಪಕ್ಷದ ಅಧ್ಯಕ್ಷನಾಗಿದ್ದೇನೆ. ಪಾರ್ಟಿಯವರು ಏನು ಹೇಳಿದ್ದಾರೆ ಅಂತ ಈಗಾಗಲೇ ಸಿಎಂ ಅವರೇ ಉಲ್ಲೇಖಿಸಿದ್ದಾರೆ. ನಾನು ಮುಖ್ಯಮಂತ್ರಿಗಳ ಹೇಳಿಕೆಯನ್ನ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ . ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಿಎಂ ಅವರೇ ಉತ್ತರಿಸಿದ್ದಾರೆ . ಸಿಎಂ ಅವರು ಮಾತನಾಡಿದ ಮೇಲೆ ಪದೇ ಪದೇ ನಾನು ಮಾತನಾಡೋದು ಸರಿಯಲ್ಲ. ಅಧಿಕಾರ ಶೇರಿಂಗ್ ಬಗ್ಗೆ ನಮಗೆ ಗಾಬರಿ ಇಲ್ಲ ನಿಮಗೆ ಯಾಕೆ ಗಾಬರಿ ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು.

ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಸಾಕಷ್ಟು ಬೆಂಬಲಿಗರಿಗೆ ಆಸೆ ಇದೆ. ಎಲ್ಲರಿಗೂ ಆಸೆಗಳು ಇರುತ್ತದೆ ಈ ಬಗ್ಗೆ ನಾನು ಸದ್ಯಕ್ಕೆ ಮಾತನಾಡಲ್ಲ. ಕಾಮೆಂಟ್ ಮಾಡುವ ಅವಶ್ಯಕತೆ ನನಗಿಲ್ಲ. ಮಾತನಾಡುವವರೇ ಎಲ್ಲಾ ಪ್ರಶ್ನೆಗಳನ್ನ ಮತ್ತು ಉತ್ತರಗಳನ್ನ ಅವರೇ ಕೊಡುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.vtu

Key words: MLAs, support, DCM, DK Shivakumar, CM, statement