ಮೈಸೂರು,ಜುಲೈ,11,2025 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಹಾಗೂ ನಾನೇ ಐದು ವರ್ಷ ಸಿಎಂ ಎಂಬ ಸಿಎಂ ಸಿದ್ದರಾಮಯ್ಯ ಹೇಳಕೆ ಕುರಿತು ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಧಾರ್ಮಿಕ ಕ್ಷೇತ್ರದಲ್ಲಿ ರಾಜಕೀಯ ಮಾತನಾಡಬಾರದು. ನಮ್ಮಲ್ಲಿ ಹೈಕಮಾಂಡ್ ಅಂತ ಇದೆ. ಎಲ್ಲ ಗೊಂದಲವನ್ನು ಅವರು ನಿವಾರಿಸುತ್ತಾರೆ. ಈಗಾಗಲೇ ನಿನ್ನೆ ಈ ವಿಚಾರವಾಗಿ ಸಿದ್ದರಾಮಯ್ಯ ಅವರೇ ಸ್ಪಷ್ಟ ಪಡಿಸಿದ್ದಾರೆ. 5 ವರ್ಷ ಅವರೇ ಸಿಎಂ ಆಗಿ ಇರ್ತಾರೆ ಅಂತ ಹೇಳಿದ್ದಾರೆ , ಇರಬಹುದು ಎನ್ನುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದರು.
ನಾನು ಬೇರೇ ಏನೂ ಹೇಳಲು ಬಯಸುವುದಿಲ್ಲ. ಪವರ್ ಶೇರಿಂಗ್ ಬಗ್ಗೆ ಮಾತುಕತೆ ನಮ್ಮ ತನಕ ಬಂದಿಲ್ಲ. ಈ ವಿಚಾರ ಪ್ರಸ್ತಾಪ ಆಗಿದೆಯಾ, ಗೊತ್ತಿಲ್ಲ. ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ಸಚಿವ ಪರಮೇಶ್ವರ್ ಹೇಳಿದರು.
Key words: CM change, issue, Minister, Parameshwar, Mysore