ಮೈಸೂರು,ಜುಲೈ,10,2025 (www.justkannada.in): ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ನಂದಿನಿ ಬ್ರಾಂಡ್ ನ ನೂತನ ವಿನ್ಯಾಸದ ನಂದಿನಿ ತುಪ್ಪದ 500 ಎಂ.ಎಲ್ ಹಾಗೂ 1 ಲೀ ಪ್ಯಾಕೆಟ್ ಅನ್ನು ಮೈಸೂರು ಜಿಲ್ಲಾ ಹಾಲು ಒಕ್ಕೂಟ ಸಹಕಾರ ಸಂಘಗಳ ಕಛೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಹಾಮದ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿರವರು ಬಿಡುಗಡೆ ಮಾಡಿದರು.
ನೂತನ ನಂದಿನಿ ತುಪ್ಪದ ಪ್ಯಾಕೆಟ್‌ನ ಮೇಲೆ ಹಾಲೋಗ್ರಾಮ್ ಮುದ್ರಿಸಲಾಗಿದ್ದು ನಕಲು ಮಾಡಲು ಅವಕಾಶವಿರುವುದಿಲ್ಲ. ತುಪ್ಪದ ಪ್ಯಾಕೆಟ್ ಕೋಡ್ ಸ್ಕ್ಯಾನ್ ಮಾಡಿದರೆ ಸಂರ್ಪೂಣ ಮಾಹಿತಿ ಸಿಗಲಿದೆ, ಪ್ಯಾಕೆಟ್ ಬ್ಯಾಚ್ ನಂಬರ್, ತಯಾರಿಸಿದ ದಿನಾಂಕ ಹಾಗೂ ಯಾವ ದಿನಾಂಕದವರೆಗೆ ಬಳಸಬಹುದು ಎಂಬುದರ ಮಾಹಿತಿ ಸಿಗಲಿದೆ.
500 ಎಂ.ಎಲ್ ಮತ್ತು 1 ಲೀ ಪ್ಯಾಕೆಟ್ ಅನ್ನು ನವೀಕರಿಸಿ ಬಿಡುಗಡೆ ಮಾಡಿದ್ದು, ತುಪ್ಪದ ಗುಣಮಟ್ಟ ಮತ್ತು ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿರುವುದಿಲ್ಲ. ಎಂದಿನಂತೆ ಅದೆ ಸ್ವಾದ ಹಾಗೂ ಪೌಷ್ಟಿಕಯುಕ್ತ ತುಪ್ಪವನ್ನು ಗ್ರಾಹಕರು ಸವಿಯಬಹುದಾಗಿರುತ್ತದೆ. ಈ ಸಂದರ್ಭದಲ್ಲಿ ಕ.ಹಾ.ಮದ ಮಾರುಕಟ್ಟೆ ನಿರ್ದೇಶಕರುಗಳು ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ನಾಯ್ಕ ಕೆ.ಎನ್ ಹಾಗೂ ಕ.ಹಾ.ಮದ ಹಿರಿಯ ನಿರ್ದೇಶಕರುಗಳು ಮತ್ತು ಎಲ್ಲಾ ಹಾಲು ಒಕ್ಕೂಟಗಳ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.
Key words: Mysore, Nandini, new, ghee packet, release