ಬೆಂಗಳೂರು,ಜುಲೈ,9,2025 (www.justkannada.in): ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕನ್ನಡ ಅಂಕವನ್ನ 125ರಿಂದ 100ಕ್ಕೆ ಇಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುಂದಾಗಿದ್ದು, ಈ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ದ ಕೇಂದ್ರ ಸಚಿವ ವಿ.ಸೋಮಣ್ಣ ಕಿಡಿಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೇಂದ್ರ ಸಚಿವ ವಿ.ಸೋಮಣ್ಣ, ಕನ್ನಡ ಭಾಷೆ ಅಂಕವನ್ನು 125ರಿಂದ 100ಕ್ಕೆ ಇಳಿಸುವ ನಿರ್ಧಾರ ಮೂರ್ಖತನದ ಪರಮಾವಧಿ. ಕನ್ನಡದ ಅಸ್ತಿತ್ವವನ್ನೇ ಪ್ರಶ್ನಿಸುವಂತಿರುವ ನಿರ್ಧಾರವಿದು. ಇದು ಕನ್ನಡ ಭಾಷೆಗೆ ದ್ರೋಹ ಬಗೆಯುವ ನಿರ್ಧಾರ. ಸರ್ಕಾರಕ್ಕೆ ಕನ್ನಡ ಮೇಲೆ ಎಂತಹ ಪ್ರೀತಿ ಇದೆ ಎಂದು ಗೊತ್ತಾಗುತ್ತದೆ ಕನ್ನಡಕ್ಕೆ ದ್ರೋಹ ಎಸಗುವಂತಹ ಆದೇಶ ತರಲು ಎಷ್ಟು ಧೈರ್ಯ..? ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕನ್ನಡ ವಿರೋಧಿ ನಿರ್ಧಾರವನ್ನ ಕೂಡಲೇ ವಾಪಸ್ ಪಡೆದು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ವಿ.ಸೋಮಣ್ಣ ಆಗ್ರಹಿಸಿದ್ದಾರೆ.
Key words: reduce, Kannada language, Marks, State government, V. Somanna