ಬೆಂಗಳೂರು,ಜುಲೈ,7,2025 (www.justkannada.in): ಕೇಂದ್ರ ಸಚಿವರ ಭೇಟಿಗಾಗಿ ನಾಳೆ ಡಿಸಿಎಂ ಡಿಕೆ ಶಿವಕುಮಾರ್ ನವದೆಹಲಿಗೆ ತೆರಳುತ್ತಿದ್ದಾರೆ.
ಈ ಕುರಿತು ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಎತ್ತಿನಹೊಳೆ ಯೋಜನೆ ವಿಚಾರವಾಗಿ ಕೇಂದ್ರ ಅರಣ್ಯ ಸಚಿವರ ಭೇಟಿಯಾಗುತ್ತೇನೆ. ಹಾಗೆಯೇ ಕೇಂದ್ರ ಜಲ ಸಂಪನ್ಮೂಲ ಸಚಿವರನ್ನೂ ಭೇಟಿಯಾಗುತ್ತೇನೆ. ಹಾಸನ ತುಮಕೂರು ಜಿಲ್ಲೆಗೆ ಇನ್ನೂ ಅನುಮತಿ ಕೊಟ್ಟಿಲ್ಲ ದೂರವಾಣಿ ಮೂಲಕ ಕೇಂದ್ರ ಸಚಿವರ ಜೊತೆ ಮಾತನಾಡಿದ್ದೇನೆ ಎಂದರು.
ಹೈಕಮಾಂಢ್ ಭೇಟಿಯಾಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿವಕುಮಾರ್, ಕಾಂಗ್ರಸ್ ಪಕ್ಷ ನಮಗೆ ದೇವಸ್ಥಾನ ಇದ್ದಂಗೆ ದೆಹಲಿಗೆ ಹೋದಾಗ ಕೈಮುಗಿದು ಬರುತ್ತೇವೆ ಎಂದರು.
Key words: DCM, DK Shivakumar , Delhi, tomorrow