ಮೈಸೂರು,ಜುಲೈ,7,2025 (www.justkannada.in): ಮನೆಗೋಡೆ ಮೇಲ್ಚಾವಣಿ ಶಿಥಿಲಗೊಂಡು ಕುಸಿತಗೊಂಡು ಮನೆಯೊಳಗಿದ್ದ ಮೂವರನ್ನ ರಕ್ಷಣೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲ್ಲೂಕು ಹೆಬ್ಬಲಕುಪ್ಪೆ ಗ್ರಾಮದಲ್ಲಿ ನಡೆದಿದೆ.
ಹೆಬ್ಬಲಗುಪ್ಪೆ ನಿವಾಸಿ ಗೋವಿಂದಶೆಟ್ಟಿ ಎಂಬವವರಿಗೆ ಸೇರಿದ ಮನೆಯ ಮೇಲ್ಚಾವಣಿ ಶಿಥಿಲಗೊಂಡು ಕುಸಿದಿದ್ದು ಸ್ಥಳೀಯರು ಮನೆಯ ಒಳಗಡೆ ಇದ್ದ ಮೂವರನ್ನ ಮೇಲ್ಚಾವಣಿ ಮೂಲಕವೇ ಹೊರಗೆ ಕರೆ ತಂದು ರಕ್ಷಣೆ ಮಾಡಿದ್ದಾರೆ.
ಗೋವಿಂದ ಶೆಟ್ಟಿ ಪತ್ನಿ ರಾಧ ಪುತ್ರ ರೋಹಿತ್ ದೊಡ್ಡಮ್ಮ ಸುವರ್ಣಮ್ಮ ಅವರನ್ನ ರಕ್ಷಣೆ ಮಾಡಿದ್ದು ಮೂವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗೋವಿಂದ ಶೆಟ್ಟಿ ಮನೆಯಿಂದ ಹೊರಗೆ ಹೋಗಿದ್ದಾಗ ಘಟನೆ ನಡೆದಿದ್ದು ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Key words: Mysore, Three rescued,house, wall, roof, collapse