ಇದನ್ನೇ ಗಂಡಾಳ್ವಿಕೆ ಅನ್ನೋದು; ಎಂಎಲ್ಸಿ ರವಿಕುಮಾರ್ ವರ್ತನೆಗೆ ಬಾನು ಮುಸ್ತಾಕ್ ಕಿಡಿ.

ಮೈಸೂರು,ಜುಲೈ,5,2025 (www.justkannada.in): ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್  ಬಗ್ಗೆ ಎಂಎಲ್ ಸಿ  ರವಿಕುಮಾರ್ ಅವಹೇಳನ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್,  ಇದನ್ನೇ ಗಂಡಾಳ್ವಿಕೆ ಎನ್ನೋದು ಎಂದು ಟೀಕಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಬಾನು ಮುಷ್ತಾಕ್ ಅವರು,  ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣನ್ನ‌ ಮೂದಲಿಸುವುದು ಗಂಡು ಎನ್ನುವ ವ್ಯಕ್ತಿ ಮೊದಲಿಂದಲೂ ರೂಢಿಸಿಕೊಂಡು ಬಂದಿದ್ದಾನೆ. ಇಂತವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ. ಸಿಟಿ ರವಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವಹೇಳನ ಮಾಡಿದ ಸಂದರ್ಭದಲ್ಲೂ ಇದೇ ರೀತಿ ಯಾಗಿತು. ಈ ಇಬ್ಬರು ಮಹಿಳೆಯರು ನಮ್ಮ ನಿಮ್ಮಂತೆ ಸಾಮಾನ್ಯರಲ್ಲ. ಮನಸ್ಸು ಮಾಡಿದ್ರೆ ಅವಹೇಳನ ಮಾಡಿರುವವರ ಬಗ್ಗೆ ಹೋರಾಟ ಮಾಡಬಹುದು ಎಂದರು.

ಇವತ್ತಿನ ರಾಜಕಾರಣಿಗಳು ವಸೂಲಿ ಬಾಜಿಗಳಾಗಿದ್ದಾರೆ

ರಾಜಕಾರಣ ಎನ್ನುವುದು ಹುಟ್ಟಿನಿಂದ ಬರುತ್ತದೆ. ಅದು ನಮ್ಮೆಲ್ಲರಲ್ಲೂ ಅಂತರ್ಗತವಾಗಿದೆ. ಅಧಿಕಾರ ಪ್ರೇರಿತ ರಾಜಕಾರಣ ಬೇರೆ. ಇವತ್ತಿನ ರಾಜಕಾರಣಿಗಳು ವಸೂಲಿ ಬಾಜಿಗಳಾಗಿದ್ದಾರೆ. ಅಧಿಕಾರಕ್ಕಾಗಿ ಏನನ್ನೂ ಬೇಕಾದರೂ  ಮಾಡುತ್ತಾರೆ ಇವತ್ತಿನ ರಾಜಕಾರಣಿಗಳು. ನಾನೂ ಕೂಡ ರಾಜಕಾರಣದಲ್ಲಿದ್ದವಳು. ಹಾಸನದ ನಗರಸಭೆಯಲ್ಲಿ ಎರಡು ಬಾರಿ ಬಹುಮತಗಳಿಂದ ಗೆದ್ದಿದ್ದೆ. ದೊಡ್ಡ ದೊಡ್ಡ ರಾಜಕಾರಣಿಗಳ ಎದುರಿಸಿ ನಿಂತಿದ್ದೆ. ನಂತರದ ದಿನಗಳಲ್ಲಿ ರಾಜಕೀಯ ಯಾಕೇ ಬೇಡ ಎನಿಸಿ ದೂರ ಉಳಿದೆ ಎಂದು ಬಾನು ಮುಷ್ತಾಕ್ ಹೇಳಿದರು.

ಕೇರಳಾದ ಜನರಷ್ಟು ಆಸಕ್ತಿ ನಮ್ಮ ಜನರಲ್ಲೂ ಬರಬೇಕು

ನನ್ನ ಬಹತೇಕ ಪುಸ್ತಕಗಳು ಮಲೆಯಾಳಂಗೆ ಭಾಷಾಂತರ ಆಗುತ್ತವೆ. ಮಲೆಯಾಳಂ ಜನರಿಗೆ ನನ್ನ ಪುಸ್ತಕಗಳು ಹೆಚ್ಚು ರೀಚ್ ಆಗುತ್ತಿದೆ. ನಮ್ಮಲ್ಲೂ ಓದುವ ಹವ್ಯಾದ ಕಡಿಮೆಯಾಗಿಲ್ಲ. ಹೆಚ್ಚು ಹೆಚ್ಚು ಪುಸ್ತಕಗಳ ಖರೀದಿ ಮಾಡುತ್ತಾರೆ. ಕೇರಳಾದ ಜನರಷ್ಟು ಆಸಕ್ತಿ ನಮ್ಮ ಜನರಲ್ಲೂ ಬರಬೇಕು ಎಂದು ಕೇರಳ ಜನರ ಬಗ್ಗೆ ಬಾನು ಮುಷ್ತಾಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಲಂಕೇಶ್ ನಿಮ್ಮ ರೂಪಿಸಿದ್ರಾ ಎಂಬ ಪ್ರಶ್ನೆಗೆ ಖಡಕ್ ಉತ್ತರ

ಲಂಕೇಶ್ ನಿಮ್ಮ ರೂಪಿಸಿದ್ರಾ ಎಂಬ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಬಾನು ಮುಷ್ತಾಕ್, ಲಂಕೇಶ್ ನನ್ನನ್ನ ರೂಪಿಸಲಿಲ್ಲ. ನನ್ನ‌ ಪುಸ್ತಕಗಳ ಪ್ರಕಟ ಆಗಲಿಕ್ಕೆ ಅವಕಾಶ ಕೊಟ್ಟರು. ಅವರೇನು ಕೈ ಹಿಡಿದು ಬರೆಸಲಿಲ್ಲ. ಬರಹಗಾರ, ಸಾಹಿತಿ ಆಗಲು ಅವರಲ್ಲೇ ಸ್ವಯಂ ಪ್ರೇರಿತವಾಗಿ ಆಸಕ್ತಿ ಬರಬೇಕು. ಈಗ ನನಗೆ ನಾಲ್ಕು ಜನ ಮಕ್ಕಳಿದ್ದಾರೆ. ಮೂರು ಜನ ಹೆಣ್ಣು ಮಕ್ಕಳು ಗೋಲ್ಡ್ ಮೆಡಲಿಸ್ಟ್ ಒಬ್ಬ ಮಗ ಇದ್ದಾನೆ ಅವನೂ ಕೂಡ ವಿದ್ಯಾವಂತ ದೊಡ್ಡ ಲೈಬ್ರರಿಯನ್ನೇ ನೋಡಿಕೊಂಡಿದ್ದಾನೆ. ಆದರೆ ಅವರ್ಯಾರನ್ನೂ ನಾನು ಲೇಖಕರನ್ನಾಗಿ ಮಾಡಲಿಕ್ಕೆ ಆಗಲಿಲ್ಲ. ಅದು ಅವರಲ್ಲೇ ಬರಬೇಕು ನಾವು ಬಲವಂತವಾಗಿ ಮಾಡಿಸಲಿಕ್ಕೆ ಆಗಲ್ಲ ಎಂದರು.

ದಸರಾ ಉದ್ಘಾಟನೆಗೆ ಆಹ್ವಾನಿಸಿದ್ರೆ ಅದು ಕರ್ತವ್ಯ ಎಂದು ಒಪ್ಪಿಕೊಳ್ಳುತ್ತೇನೆ

ಈ ಬಾರಿಯ ದಸರಾ ಉದ್ಘಾಟಕರಾಗಿ ತಮ್ಮನ್ನು ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಬಾನು ಮುಷ್ತಾಕ್, ಸರ್ಕಾರ ಆಹ್ವಾನಿಸಿದ್ರೆ ಅದು ಕರ್ತವ್ಯ ಎಂದು ಒಪ್ಪಿಕೊಳ್ಳುತ್ತೇನೆ. ಅದು ನಾನು ನಾಡಿ ನುಡಿಗೆ ಸಲ್ಲಿಸುವಂತ ಗೌರವ ಎಂದು ಭಾವಿಸುತ್ತೇನೆ. ಅದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಮೈಸೂರು ಅಂದರೆ ನನಗೆ ನೆನಪಾಗೋದು ನಮ್ಮ ತಂದೆ ಇಲ್ಲೇ ಕೆಆರ್ಎಸ್ ನಲ್ಲಿ ಸೀನಿಯರ್  ಇನ್ಸ್ಪೆಕ್ಟರ್ ಆಗಿದ್ದರು ಆಗ ನಾನು ವಾರಕ್ಕೊಮ್ಮೆ  ಮೈಸೂರಿಗೆ ಬರುತ್ತಿದ್ದೆ. ನಾನು ಚಿಕ್ಕವಳಿದ್ದಾಗ ಜಯಚಾಮರಾಜೇಂದ್ರ ಒಡೆಯರ್ ಮಹಾರಾಜರಿದ್ದಾಗ ಜಂಬೂ ಸವಾರಿ ವೀಕ್ಷಣೆ ಮಾಡಿದ್ದೇನೆ. ಮೈಸೂರಿಗೆ ಬಂದಾಗ ಅದೆಲ್ಲಾ ನೆನಪಾಗುತ್ತದೆ. ನಾನು ಬೂಕರ್ ಪ್ರಶಸ್ತಿ ಪಡೆದಿರುವುದಕ್ಕೆ ನಮ್ಮ ನಾಡಿನೆಲ್ಲೆಡೆ ತಾವೇ ಪಡೆದಂತೆ ಜನ ಸಂಭ್ರಮಿಸುತ್ತಿದ್ದಾರೆ. ಅದಕ್ಕಿಂತ ಇನ್ನೇನು ಬೇಕು ಎಂದು ಬಾನು ಮುಷ್ತಾಕ್ ಸಂತಸ ವ್ಯಕ್ತಪಡಿಸಿದರು.

ಸಂವಾದದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಉಪಾಧ್ಯಕ್ಷ ರವಿ ಪಾಂಡವಪುರ, ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ್ ಉಪಸ್ಥಿತರಿದ್ದರು.vtu

Key words: Mysore, Banu Mustak, MLC, Ravikumar