ಮೈಸೂರು,ಜುಲೈ,5,2025 (www.justkannada.in): ಆರ್ ಎಸ್ ಎಸ್ ಬ್ಯಾನ್ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಬಿಜೆಪಿ ಶಾಸಕ ಶ್ರೀವತ್ಸ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಶ್ರೀವತ್ಸ ಅವರು, ಪ್ರಿಯಾಂಕ್ ಖರ್ಗೆ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಮಾತನಾಡುತ್ತಿದ್ದಾರೆ. ಅವರು ಒಂದು ಗಂಟೆ ಆರ್ ಎಸ್ ಎಸ್ ಶಾಖೆಗೆ ಹೋಗಿ ಬರಲಿ. ಅಲ್ಲಿ ಏನು ನಡೆಯುತ್ತಿದೆ ಎಂಬುದು ಅವರಿಗೆ ಗೊತ್ತಾಗುತ್ತದೆ ಎಂದರು.
ಆರ್ ಎಸ್ ಎಸ್ ಹೇಗೆ ದೇಶ ದ್ರೋಹಿ ಸಂಘಟನೆ. ಆರ್ ಎಸ್ ಎಸ್ ಬಗ್ಗೆ ತಿಳುವಳಿಕೆ ಇಲ್ಲದೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆಗೆ ಏನು ಗೊತ್ತಿದೆ. ಹಿಂದೆ ಇದೇ ಕಾಂಗ್ರೆಸ್ ಆರ್ ಎಸ್ ಎಸ್ ಬ್ಯಾನ್ ಮಾಡಿ. ಅದನ್ನು ಮತ್ತೆ ವಾಪಾಸ್ ತೆಗೆದುಕೊಂಡಿತ್ತು. ಆಗ ಪ್ರಿಯಾಂಕ ಖರ್ಗೆ ಶಾಲೆಗೆ ಹೋಗುತ್ತಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾನೇ ಪ್ರಿಯಾಂಕ ಖರ್ಗೆ ಮಾತು ನಿಜವಾಗೋದು. ಇನ್ನು ಇಪ್ಪತ್ತು ವರ್ಷ ಕಾಲ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಅಧಿಕಾರದಲ್ಲಿ ಇರುತ್ತೆ. ಪ್ರಿಯಾಂಕ ಖರ್ಗೆ ಸುಮ್ಮನೆ ಕನಸು ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Key words: Priyank Kharge, RSS, branch, MLA, Srivatsa