ಮೈಸೂರು,ಜುಲೈ,5,2025 (www.justkannada.in): ನಿನ್ನೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ನೇತೃತ್ವದಲ್ಲಿ ನಡೆದ ಜನಸ್ಪಂದನ ಸಭೆಯುದ್ದಕ್ಕೂ ನ್ಯೂಸ್ ಫಸ್ಟ್ ವರದಿಗಳು ಸದ್ದು ಮಾಡಿದವು.
ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಒಂದಲ್ಲ, ಎರಡಲ್ಲ,ಹತ್ತಕ್ಕೂ ಹೆಚ್ಚು ನ್ಯೂಸ್ ಫಸ್ಟ್ ವರದಿಗಳ ಕುರಿತು ಭಾರಿ ಚರ್ಚೆಯಾಯಿತು. ಸಭೆಯಲ್ಲಿ ಡಿಸಿ ಲಕ್ಷ್ಮೀಕಾಂತರೆಡ್ಡಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಮಾರ್ದನಿಸಿದ ನ್ಯೂಸ್ ಫಸ್ಟ್ ವರದಿಗಳು
- ಕಬಿನಿ ಹಿನ್ನೀರಿನಲ್ಲಿರುವ ಅಕ್ರಮ ರೆಸಾರ್ಟ್- ಹೋಂ ಸ್ಟೇಗಳು
- ಅಕ್ರಮ ಶುಂಠಿಕೇಂದ್ರಗಳಿಂದ ಕಬಿನಿ ಕಲುಷಿತ
- ಕಬಿನಿಯಲ್ಲಿರುವ ಸುಭಾಷ್ ಪವರ್ ಕಾರ್ಪೊರೇಷನ್ ಕಳ್ಳಾಟ
- ನಕಲಿ ವ್ಯಕ್ತಿಗಳನ್ನ ಸೃಷ್ಠಿಸಿ ಆಸ್ತಿ ಪರಭಾರೆ ಮಾಡಿ ಕಳ್ಳಾಟ ಆಡಿದ ಅಧಿಕಾರಿಗಳ ಕುರಿತ ವರದಿ
- ಕೇರಳ – ಕರ್ನಾಟಕ ಗಡಿಯಲ್ಲಿ ಅಕ್ರಮ ಮದ್ಯ ಮಾರಾಟ
- ಜಮೀರ್ ಅಹಮ್ಮದ್ ಖಾನ್ ಆಪ್ತಸಹಾಯಕ ಸರ್ಪೋಜ್ ಖಾನ್ ಅವರ ರೆಸಾರ್ಟ್ ಕುರಿತು ಚರ್ಚೆ
- ನಂಜನಗೂಡು ಭಾಗದಲ್ಲಿ ಬೀದಿ ನಾಯಿಗಳ ಹಾವಳಿ
- ವರುಣಾ ಭಾಗದಲ್ಲಿ ಕೆಐಡಿಬಿಐ ಅಧಿಕಾರಿಗಳಿಂದ ರೈತರ ಭೂಮಿ ವಶಕ್ಕೆ ಯತ್ನ
- ನಕಲಿ ವ್ಯಕ್ತಿಗಳನ್ನ ಸೃಷ್ಠಿಸಿ , ಅಕ್ರಮ ಭೂ ಕಬಳಿಕೆ ವರದಿಗಳು
- ಕಬಿನಿ ಬಿರುಕು ಕುರಿತು ವರದಿ
ನ್ಯೂಸ್ ಫಸ್ಟ್ ಹಿರಿಯ ವರದಿಗಾರ ರವಿ ಪಾಂಡವಪುರ ಈ ಸಂಬಂಧ ಸಾಲು ಸಾಲು ವರದಿಯನ್ನು ಮಾಡಿದ್ದರು. ಈ ಸಾಲು- ಸಾಲು ವರದಿಗಳ ಕುರಿತು ಜನಸ್ಪಂದನಾ ಸಭೆಯಲ್ಲಿ ಚರ್ಚೆಯಾಯಿತು.
ರೈತರು, ಹೋರಾಟಗಾರರಿಂದ ಸಚಿವರಿಗೆ ಸಾಲು-ಸಾಲು ಮನವಿ ಪತ್ರಗಳ ಸಲ್ಲಿಕೆಯಾಗಿದ್ದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಭೆಯಲ್ಲಿ ಸಚಿವರು ಭರವಸೆ ನೀಡಿದದರು.
ಹಲವು ಪ್ರಕರಣಗಳ ಕುರಿತು ತಹಶಿಲ್ದಾರ್, ಎಸಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ ಸಚಿವ ಮಹದೇಔಪ್ಪ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಿದರು. ತಪ್ಪಾಗಿದ್ದರೆ ಅಗತ್ಯ ಕಾನೂನು ಕ್ರಮ ಎಂದು ಸಚಿವ ಮಹದೇವಪ್ಪ ತಿಳಿಸಿದರು.
Key words: MYSORE, NEWS FIRST, report, Meeting