ಮೈಸೂರು,ಜುಲೈ,4,2025 (www.justkannada.in): ದುಷ್ಕರ್ಮಿಯೊಬ್ಬ ತಾನು ಸಿಬಿಐ ಅಧಿಕಾರಿ ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂದು ಬೆದರಿಸಿ ಮೈಸೂರಿನ ವೃದ್ದರೊಬ್ಬರ ಬಳಿ 7 ಲಕ್ಷ ಹಣ ಪೀಕಿದ ಘಟನೆ ನಡೆದಿದ್ದು ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನಿಮಂಟಪ ಲೇಔಟ್ ನ ನಿವಾಸಿ ಡಾ.ನಜರುಲ್ಲಾ(72) ವಂಚನೆಗೆ ಒಳಗಾದವರು. ಡಾ.ನಜರುಲ್ಲಾ ಫೋನ್ ಗೆ ಕರೆ ಮಾಡಿದ ವಂಚಕ ತಾನು ಸಿಬಿಐ ಅಧಿಕಾರಿ ಎಂದು ಬೆದರಿಸಿದ್ದಾನೆ. ವ್ಯಕ್ತಿಯೊಬ್ಬನನ್ನ ಅರೆಸ್ಟ್ ಮಾಡಿ ಆತನ ಮೊಬೈಲ್ ಸೀಜ್ ಮಾಡಿ ಪರಿಶೀಲಿಸಿದಾಗ ಸಿಮ್ ಕಾರ್ಡ್ ನಿಮ್ಮ ಹೆಸರಲ್ಲಿದ್ದು ಮಾನವ ಕಳ್ಳಸಾಗಣೆ ಮಾಡುತ್ತಿರುವ ಆರೋಪ ಹೊರೆಸಿ ಬೆದರಿಸಿ 7 ಲಕ್ಷ ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಈ ಸಂಬಂಧ ಡಾ.ನಜರುಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Key words: 7 lakhs, fraud, fake, CBI officer, Mysore