ನಟ ದರ್ಶನ್ ದಂಪತಿ ವಿಚಾರಣೆ ಮುಂದೂಡಿದ ಕೋರ್ಟ್

ಮೈಸೂರು,ಜುಲೈ,4,2025 (www.justkannada.in):  ಫಾರಂ ಹೌಸ್ ನಲ್ಲಿ ವಿದೇಶಿ ಬಾತುಕೋಳಿ ಸಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ದಂಪತಿ ವಿಚಾರಣೆಯನ್ನ ನ್ಯಾಯಾಲಯ ಸೆಪ್ಟಂಬರ್ 4ಕ್ಕೆ ಮುಂದೂಡಿಕೆ ಮಾಡಿದೆ.

ವಿದೇಶಿ ಬಾತುಕೋಳಿ ಸಾಕಲು ಯಾವುದೇ ಅನುಮತಿ ಪಡೆಯದ ಹಿನ್ನಲೆ ನಟ ದರ್ಶನ್ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು.  ಕಳೆದ 2 ವರ್ಷದ ಹಿಂದೆ  ಅರಣ್ಯ ಇಲಾಖೆ ನೋಟಿಸ್ ನೀಡಿ ಎಫ್.ಐ.ಆರ್ ದಾಖಲಿಸಿತ್ತು.

ಟಿ.ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿ ಫಾರಂ ಹೌಸ್ ನಲ್ಲಿ ನಟ ದರ್ಶನ್ ಬಾರ್ ಹೆಡೆಡ್ ಗೂಸ್ ಬಾತುಕೋಳಿ ಸಾಕಿದ್ದರು. ಖಾಸಗಿ ಯು ಟ್ಯೂಬ್ ಚಾನೆಲ್  ಪ್ರಸಾರವಾದ ಸಂದರ್ಶನದಲ್ಲಿ ಬಾತುಕೋಳಿ ಬಗ್ಗೆ ನಟ ದರ್ಶನ್ ಮಾಹಿತಿ ನೀಡಿದ್ದರು.  ಈ ಹಿನ್ನಲೆಯಲ್ಲಿ ದರ್ಶನ್, ವಿಜಯಲಕ್ಷ್ಮಿ, ತೋಟದ ಮ್ಯಾನೇಜರ್ ನಾಗರಾಜುಗೆ ಕೋರ್ಟ್ ನೋಟಿಸ್ ನೀಡಿತ್ತು.

ಈ ಮಧ್ಯೆ ಇಂದು ತಿ.ನರಸಿಪುರ ಕೋರ್ಟ್ ಗೆ ನಟ ದರ್ಶನ್ ಹಾಜರಾಗಬೇಕಿತ್ತು.  ನಟ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಪರವಾಗಿ ಹಿರಿಯ ವಕೀಲ ಬಸವಣ್ಣ ಕೋರ್ಟ್ ಗೆ ಹಾಜರಾಗಿದ್ದರು.  ಕೋರ್ಟ್ ಕೇಸ್ ವಿಚಾರಣೆಗೆ ಸೆಪ್ಟೆಂಬರ್ 4 ರಂದು ದಿನಾಂಕ ನಿಗದಿ ಮಾಡಿ ವಿಚಾರಣೆ ಮುಂದೂಡಿಕೆ ಮಾಡಿತು.vtu

Key words: Mysore, Court, postpones, hearing , actor, Darshan