ರಾಜ್ಯದಲ್ಲಿ ಅಭಿವೃದ್ದಿ ಕೆಲಸ ಇಲ್ಲ: ಜನರ ಪಾಲಿಗೆ ಈ ಸರ್ಕಾರ ಬದುಕೇ ಇಲ್ಲ- ಬಿವೈ ವಿಜಯೇಂದ್ರ

ಬೆಂಗಳೂರು,ಜುಲೈ,4,2025 (www.justkannada.in):  ರಾಜ್ಯದಲ್ಲಿ ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಜನರ ಪಾಲಿಗೆ ಈ ಸರಕಾರ ಬದುಕಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.

ಪ್ರಾರ್ಥನೆ ಫಲಿಸುತ್ತದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಬಹಳಷ್ಟು ಜನ ಪ್ರಯತ್ನ ಪ್ರಾರ್ಥನೆ ಮಾಡುತ್ತಿದ್ದಾರೆ. ಸುರ್ಜೇವಾಲ ಕರೆಸಿ ಗುದ್ದಲಿಪೂಜೆ ಕೂಡ ಮಾಡಿಸಿದ್ದಾರೆ. ಯಾರು ಸಿಎಂ ಆಗುತ್ತಾರೆ ಎನ್ನುವುದು ಮುಖ್ಯ ಅಲ್ಲ. ಅಭಿವದ್ದಿ ಕೆಲಸ ಆಗುತ್ತಿಲ್ಲ. ಜನರು ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಆಗುತ್ತಿಲ್ಲ. ಇದು ದರಿದ್ರ ಸರ್ಕಾರ. ಜನರ ಪಾಲಿಗೆ ಈ ಸರ್ಕಾರ ಬದುಕಿಲ್ಲ  ಎಂದು ವಾಗ್ದಾಳಿ ನಡೆಸಿದರು.

ಸರ್ಕಾರ ಬೀಳುತ್ತದೆ ಎಂಧು ಕಾಂಗ್ರೆಸ್ ನವರೇ ಹೇಳಿದ್ದಾರೆ  ರಾಮನಗರ ಅಭಿವೃದ್ದಿ ಆಗುತ್ತಿಲ್ಲ ಎಂದು ಇಕ್ಬಾಲ್ ಹುಸೇನ್ ಹೇಳಿದ್ದಾರೆ.  ಮುಂದಿನ ದಿನದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಕಾದು ನೋಡಿ ಆನೇಕ ಬೆಳವಣಿಗೆಗೆ ಸಾಕ್ಷಿ ಆಗಲಿದ್ದೀರಿ ಎಂದು ಬಿ ವೈ ವಿಜಯೇಂದ್ರ ತಿಳಿಸಿದರು.vtu

Key words: no development, work, government, BY Vijayendra