ಮನೆಯಲ್ಲಿ ಕುಳಿತು ಇ-ಖಾತಾ ಪಡೆಯುವ ಸಾಫ್ಟ್ ವೇರ್ ನಮ್ಮ ರಾಜ್ಯದಲ್ಲೂ ತನ್ನಿ – ಮಾಜಿ ಮೇಯರ್ ಶಿವಕುಮಾರ್ ಒತ್ತಾಯ

ಮೈಸೂರು,ಜುಲೈ,3,2025 (www.justkannada.in): ಇ-ಖಾತಾ ಮಾಡಿಸಿಕೊಳ್ಳಲು  ಸಾರ್ವಜನಿಕರು ಅಲೆದಾಡುತ್ತಿದ್ದಾರೆ. ಹೀಗಾಗಿ ಇತರೆ ರಾಜ್ಯಗಳಲ್ಲಿ ಬಳಕೆ ಮಾಡುಲಾಗುತ್ತಿರುವ ತಂತ್ರಜ್ಞಾನವನ್ನ ನಮ್ಮ ರಾಜ್ಯದಲ್ಲೂ ಬರಲಿ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಶಿವಕುಮಾರ್ ಒತ್ತಾಯಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್,  ಸ್ಥಳೀಯ ಸಂಸ್ಥೆಗಳಲ್ಲಿ ಕಳೆದ ಒಂದು ತಿಂಗಳಿಂದ ಸಾರ್ವಜನಿಕರಿಗೆ ಅಧಿಕಾರಿಗಳಿಂದ ಸಮಸ್ಯೆ ಆಗುತ್ತಿದೆ. ಒಂಭತ್ತು ವಲಯ ಕಚೇರಿಗಳಲ್ಲಿ 7ರಿಂದ 8ಸಾವಿರ ಖಾತೆಗಳು ಆಗಿಲ್ಲ. ಇ-ಖಾತಾ ಮಾಡಿಸಿಕೊಳ್ಳಲು ಪ್ರತಿನಿತ್ಯ ಸಾರ್ವಜನಿಕರು ಅಲೆದಾಡುತ್ತಿದ್ದಾರೆ. ಪರಿಪೂರ್ಣ ಅಂಶಗಳು ಇಲ್ಲದ ತಂತ್ರಜ್ಞಾನವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಮೈಸೂರಿನಲ್ಲಿ ಎರಡೂವರೆ ಲಕ್ಷ ಪ್ರಾಪರ್ಟಿಗಳು ಇವೆ. ಇದೆಲ್ಲವನ್ನ ಪಾಲಿಕೆ ಹೇಗೆ ನಿಭಾಯಿಸುತ್ತದೆ ಎಂದು ಪ್ರಶ್ನಿಸಿದರು.

ಜನರನ್ನ ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನ ಸರ್ಕಾರ ಮಾಡಿದೆ. ಸಾರ್ವಜನಿಕರು ತಮ್ಮ ಅಸ್ತಿಗಳಿಗೆ ಇ-ಖಾತಾ ಇಲ್ಲದೆ ಮಾರಾಟ ಮಾಡಲು ಆಗುತ್ತಿಲ್ಲ. ಈ ಕಾರಣಕ್ಕೆ ಪಾಲಿಕೆ ಕಚೇರಿಗಳತ್ತ ಜನ ದೌಡಾಯಿಸುತ್ತಿದ್ದಾರೆ. ಪಾಲಿಕೆಗಳಲ್ಲಿ ಈಗಿರುವ ಸಾಫ್ಟ್ ವೇರ್ ಸರಿಯಿಲ್ಲ. ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತು ಇ ಖಾತಾ ಪಡೆಯುವ ಸಾಫ್ಟ್ ವೇರ್ ಗಳನ್ನ ಇತರೆ ರಾಜ್ಯಗಳಲ್ಲಿ ಬಳಕೆ ಮಾಡುತ್ತಿದ್ದಾರೆ. ಇಂತಹ ತಂತ್ರಜ್ಞಾನ ನಮ್ಮ ರಾಜ್ಯಕ್ಕೂ ಬರಲಿ. ಸ್ಥಳೀಯ ಸಂಸ್ಥೆಗಳಲ್ಲಿ ಆಗುತ್ತಿರುವ ಸಮಸ್ಯೆ ಬಗೆಹರಿಸಲಿ ಎಂದು ಮಾಜಿ ಮೇಯರ್ ಶಿವಕುಮಾರ್ ಒತ್ತಾಯಿಸಿದರು.vtu

Key words: e-Khata, software, Mysore, Former Mayor, Shivakumar