ಶಿವಮೊಗ್ಗ,ಜುಲೈ,2,2025 (www.justkannada.in): ಕಾರಿನ ಟೈರ್ ಸ್ಪೋಟಗೊಂಡು ಬೈಕ್ ಗಳಿಗೆ ಡಿಕ್ಕಿಹೊಡೆದ ಪರಿಣಾಮ ಐದು ಬೈಕ್ ಗಳು ಜಖಂಗೊಂಡು ಓರ್ವ ವ್ಯಕ್ತಿಗೆ ಗಾಯಗಳಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ನಡೆದಿದೆ.
ತರಲಘಟ್ಟದ ಬಳಿ ಕಾರಿನ ಟಯರ್ ಬ್ಲಾಸ್ಟ್ ಆಗಿ ಚಿಕನ್ ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಕಾರು ಗುದ್ದಿದ ರಭಸಕ್ಕೆ ಐದು ಬೈಕ್ ಗಳು ಚೆಲ್ಲಾಪಿಲ್ಲಿಯಾಗಿ ಸಂಪೂರ್ಣ ಜಖಂ ಆಗಿವೆ. ಅಪಘಾತದ ರಭಸಕ್ಕೆ ಐದು ಬೈಕ್ ಗಳು ಚೆಲ್ಲಾಪಿಲ್ಲಿಯಾಗಿದ್ದು ಬೈಕ್ ಮೇಲೆ ಕುಳಿತಿದ್ದ ಯುವಕನಿಗೂ ಗಂಭೀರ ಗಾಯಗಳಾಗಿದೆ, ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೃಷ್ಟಾವಶಾತ್ ಭಾರೀ ಅವಘಡ ತಪ್ಪಿದ್ದು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Key words: Car, tire, bursts, horrific accident