ಡಿಸೆಂಬರ್ ವೇಳೆಗೆ ಕಾಂಗ್ರೆಸ್ ಸರ್ಕಾರ ಪತನ- ಸಂಸದ ಗೋವಿಂದ ಕಾರಜೋಳ

ಬಾಗಲಕೋಟೆ,ಜುಲೈ,1,2025 (www.justkannada.in): ಕಾಂಗ್ರೆಸ್ ಸರ್ಕಾರ ಡಿಸೆಂಬರ್ 31 ದಾಟುವುದಿಲ್ಲ, ಸರ್ಕಾರ ಪತನವಾಗುತ್ತದೆ ಎಂದು  ಮಾಜಿ ಡಿಸಿಎಂ ,ಸಂಸದ ಗೋವಿಂದ ಕಾರಜೋಳ ಭವಿಷ್ಯ ನುಡಿದರು.

ಬಾಗಲಕೋಟೆಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಗೋವಿಂದ ಕಾರಜೋಳ, ಕಾಂಗ್ರೆಸ್ ನ  ಹಿರಿಯನಾಯಕರಲ್ಲಿ ಮಂತ್ರಿ ಮಾಡಿಲ್ಲ ಅನ್ನೋ ಅಸಮಧಾನ ಇದೆ. ಶಾಸಕರಾದ ಬಿ.ಆರ್ ಪಾಟೀಲ್, ಬಸವರಾಜ ರಾಯರೆಡ್ಡಿ, ಆರ್.ವಿ ದೇಶಪಾಂಡೆ, ಜಯಚಂದ್ರ ಅಂತವರಲ್ಲಿ ಅಸಮಾಧಾನವಿದೆ.  ಈ ಕಾಂಗ್ರೆಸ್ ಸರ್ಕಾರ ಇದ್ರೆ ಎಷ್ಟು ಹೋದ್ರೆ ಎಷ್ಟು, ಸರ್ಕಾರದಲ್ಲಿ ನಮಗೆ ಗೌರವ ಇಲ್ಲ. ಹೀಗಾಗಿ ಈ ಸರ್ಕಾರ ಬಹಳ ದಿವಸ ಉಳಿಯೋದಿಲ್ಲ ಎಂದರು.

ಸಿಎಂ ಹುದ್ದೆಗೆ ನಾಲ್ಕು ಗುಂಪುಗಳಾಗಿ ಕಚ್ಚಾಟ ಶುರುವಾಗಿದೆ. ದಲಿತ ಸಿಎಂ ಆಗಬೇಕು ,ಅದ್ರಲ್ಲಿ ಎಸ್ ಸಿ ಆಗಬೇಕು, ಎಸ್ ಟಿ ಆಗಬೇಕು ಅನ್ನೊ ಕಿತ್ತಾಟ. ಎರಡನೇಯದಾಗಿ ಲಿಂಗಾಯತರು ಸಿಎಂ ಆಗಬೇಕು ಅಂತಾ ಹೈ ಕಮಾಂಡ್ ಮೇಲೆ ಒತ್ತಡ. ಮೂರನೇಯದ್ದಾಗಿ ಒಕ್ಕಲಿಗರಿಗೆ ಅವಕಾಶ ಸಿಕ್ಕಿಲ್ಲ, ಡಿಕೆ ಶಿವಕುಮಾರ್ ನಾ ಸಿಎಂ ಮಾಡಲು ಜಟಾಪಟಿ. ಇವರೆಲ್ಲರ ನಡುವೆ ಇದೀಗ ಅಲ್ಪಸಂಖ್ಯಾತರು ಸಭೆ ಮೂಲಕ ಸಿಎಂ ಖುರ್ಚಿ ನಮ್ಮ ಸಮುದಾಯಕ್ಕೆ ನೀಡಿ ಅಂತಿದೆ. ಹೀಗೆ ಕಾಂಗ್ರೆಸ್ ನಲ್ಲಿ ನಾಲ್ಕು ಗುಂಪುಗಳಾಗಿ ಸಿಎಂ ಖುರ್ಚಿಗಾಗಿ ತಿಕ್ಕಾಟ ನಡೆಯುತ್ತಿದೆ. ಸತ್ತ ಹೆಣ ತಿನ್ನಲಿಕ್ಕೆ ರಣಹದ್ದುಗಳು ಹೇಗೆ ಕಚ್ಚಾಡುತ್ತಿರುತ್ತವೆ ಹಾಗೆ. ಕಾಂಗ್ರೆಸ್ ನಲ್ಲಿ ಸಿಎಂ ಖುರ್ಚಿಗಾಗಿ ಕಚ್ಚಾಟ ಶುರುವಾಗಿದೆ. ಆಡಳಿತದ ಮೇಲೆ ಸರ್ಕಾರದ ಹಿಡಿತ ಕೈ ತಪ್ಪಿದೆ ಎಂದು ಆರೋಪಿಸಿದರು.

ಎಸ್ ಸಿ ಎಸ್ ಟಿ ಅನುದಾನ ಸರ್ಕಾರ ದುರುಪಯೋಗ ಮಾಡಿಕೊಂಡಿದೆ. ಇದೊಂದು ಬಂಡ ಸರ್ಕಾರ. ಈ ಸರ್ಕಾರ ಹೋಗಬೇಕು ಎಂದು  ಕಾಂಗ್ರೆಸ್ ಎಲ್ಲ ಹಿರಿಯ ನಾಯಕರು ತೀರ್ಮಾನ ಮಾಡಿದ್ದಾರೆ. ಈ ಸರ್ಕಾರ ಡಿಸೆಂಬರ್ 31 ದಾಟೊದಿಲ್ಲ, ಸರ್ಕಾರ ಪತನವಾಗುತ್ತೆ ಎಂದು ಸಂಸದ ಕಾರಜೋಳ ಹೇಳಿದರು.vtu

Key words: Congress government, fall, December, MP, Govinda Karajola