ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ- ಸ್ನೇಹಮಯಿ ಕೃಷ್ಣ

ಮೈಸೂರು,ಜುಲೈ,1,2025 (www.justkannada.in): ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗೇ ಹೋಗ್ತಾರೆ ಕಾದು ನೋಡಿ ಎಂದು  ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಭವಿಷ್ಯ ನುಡಿದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ನೇಹಮಯಿ ಕೃಷ್ಣ,  ಅಧಿಕಾರ ದುರುಪಯೋಗ ಪಡಿಸಿದಕೊಂಡು ಇಲ್ಲಿವರೆಗೆ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ಇವತ್ತಲ್ಲ ನಾಳೆ ಅವರು ಜೈಲಿಗೆ ಹೋಗಲೇ ಬೇಕಾದ ಸಂದರ್ಭ ಬಂದೇ ಬರುತ್ತದೆ. ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆಗೆ ಬೇಕಾದ ಪೂರಕ ಸಾಕ್ಷ್ಯಾಧಾರಗಳ ಒದಗಿಸಿದ್ದೇನೆ. ಸಾಕ್ಷ್ಯಾಧಾರಗಳ ನಾಶ ಮಾಡುವ ಕೆಲಸವನ್ನ ಪೋಲಿಸರಿಂದ ಮಾಡಿಸುತ್ತಿದ್ದಾರೆ. ಸಿಎಂ ತಪ್ಪಿತಸ್ಥರೆಂದು 14 ನಿವೇಶನಗಳ ಹಿಂದಿರುಗಿಸಿದಾಗಲೇ ಜನರಿಗೆ ಗೊತ್ತಾಗಿದೆ. ಕಾದು ನೋಡಿ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಾರೆ ಎಂದರು.

ಮುಡಾ ಹಗರಣ ಪ್ರಕರಣದ ಸಂಬಂಧ, ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎಂದು ಆರೋಪಿಸಿ ಜಿ.ಟಿ ಉದೇಶ್ ವರ್ಗಾವಣೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಕೋರ್ಟ್ ಮೊರೆ ಹೋಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ, ಮುಡಾ ಪ್ರಕರಣದ ತನಿಖೆಯನ್ನ ಪಾರದರ್ಶಕವಾಗಿ ಮಾಡುತ್ತಿಲ್ಲ. ಸಾಕ್ಷ್ಯಾಧಾರಗಳ ನಾಶಪಡಿಸುವ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯರನ್ನ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಇವರೇ ಸಹಕರಿಸುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ಕೂಡಲೇ ಉದೇಶ್ ರನ್ನ ವರ್ಗಾವಣೆ ಮಾಡಬೇಕು ಎಂದು ನಿನ್ನೆ ಕೋರ್ಟ್ ನಲ್ಲಿ ವಾದ ಮಂಡಿಸಿದ್ದೇನೆ. ವಿಚಾರಣೆಯನ್ನ ಜುಲೈ 15 ಕ್ಕೆ ಮುಂದೂಡಿದ್ದಾರೆ ಎಂದು ತಿಳಿಸಿದರು.vtu

Key words: CM Siddaramaiah, jail , Snehamayi Krishna