ಸೇತುವೆಯಿಂದ ನದಿಗೆ ಹಾರಿದ್ದ ವ್ಯಕ್ತಿಯ ಶವ ಪತ್ತೆ.

ಮೈಸೂರು ,ಜುಲೈ,1,2025 (www.justkannada.in): ಸೇತುವೆಯಿಂದ ಲಕ್ಷ್ಮಣತೀರ್ಥ ನದಿಗೆ  ಹಾರಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.

ಹುಣಸೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ತಹಸೀಲ್ದಾರ್ ಕಚೇರಿ ಬಳಿ ಇರುವ ಸೇತುವೆಯಿಂದ ಲಕ್ಷ್ಮಣತೀರ್ಥ ನದಿಗೆ  ಹುಣಸೂರು ತಾಲೂಕು ಎಮ್ಮೆಕೊಪ್ಪಲು ಗ್ರಾಮದ ಪುರುಷೋತ್ತಮ್ (45) ಹಾರಿದ್ದರು. ಕಳೆದ ಮೂರು ದಿನಗಳ ಹಿಂದೆ ನದಿಗೆ ಹಾರಿದ್ದು, ಮೂರು ದಿನಗಳಿಂದ ಹುಣಸೂರು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ತನ್ನ ಅಣ್ಣ ರವಿಗೆ ಫೋನ್ ಮಾಡಿ ನಾನು ನದಿಗೆ ಹಾರುತ್ತಿದ್ದೇನೆ ಮಕ್ಕಳನ್ನ ನೋಡಿಕೋ ಎಂದು ಹೇಳಿ ಪುರುಷೋತ್ತಮ್ ನದಿ ಹಾರಿದ್ದು  ಸ್ಥಳದಲ್ಲಿ ಬೈಕ್,‌ ಮೊಬೈಲ್ ಹಾಗೂ ಚಪ್ಪಲಿಗಳು ಪತ್ತೆಯಾಗಿತ್ತು.

ಇದೀಗ ಇಂದು ಬೆಳಗ್ಗೆ ಪುರುಷೋತ್ತಮ್ ಮೃತದೇಹ ಪತ್ತೆಯಾಗಿದ್ದು, ಹುಣಸೂರು ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.vtu

Key words: Mysuru,  bridge, river, found, Body