MYSORE DEVELOPMENT AUTHORITY: ಪ್ರತಿ ಶನಿವಾರ ನೋಟಿಸ್‌, ಸೋಮವಾರ ಡೆಮಾಲಿಷನ್‌ ಡ್ರೈವ್..!

Commissioner Rakshit said that as soon as the land audit report is received, the authority's property will be cleared of encroachments and protected. From now on, notices will be issued to the concerned encroachers every Saturday and the encroachment clearance process will be taken up on Monday.

K.R.Rakshith, commissioner, MDA

vtu

ಮೈಸೂರು, ಜೂ.೨೩,೨೦೨೫: ಅಕ್ರಮವಾಗಿ ಅತಿಕ್ರಮಿಸಿರುವ ನಿವೇಶನ ಹಾಗೂ ಜಮೀನುಗಳ ಒತ್ತುವರಿ ತೆರವಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ. ಈ ಸಂಬಂಧ ಮುಂದಿನ ೧೫ ದಿನಗಳಲ್ಲಿ ಭೂ ಅತಿಕ್ರಮಣದ ಆಡಿಟ್‌ ವರದಿ ಎಂ.ಡಿ.ಎ ಕೈ ಸೇರಲಿದೆ.

ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ನಿವೇಶನ ಹಾಗೂ ಜಮೀನುಗಳ ಒತ್ತುವರಿ ತೆರವು ಸಂಬಂದ ಪ್ರಾಧಿಕಾರದ ಆಯುಕ್ತ ಕೆ.ಆರ್.‌ ರಕ್ಷಿತ್‌ “ ಜಸ್ಟ್‌ ಕನ್ನಡ” ಜತೆ ಮಾತನಾಡಿ ಮಾಹಿತಿ ನೀಡಿದರು.

ಪ್ರಾಧಿಕಾರಕ್ಕೆ ಸೇರಿರುವ ಭೂಮಿಯನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಂ.ಡಿ.ಎ ಮುಂದಾಗಿದೆ. ಈ ಸಂಬಂಧ ಈಗಾಗಲೇ ಅಗತ್ಯ ಗ್ರೌಂಡ್‌ ವರ್ಕ್‌ ಶುರುವಾಗಿದೆ. ಮುಂದಿನ ೧೫ ದಿನಗಳಲ್ಲಿ ಇದರ ಆಡಿಟ್‌ ವರದಿ ಕೈ ಸೇರಲಿದೆ. ಬಳಿಕ ಒತ್ತುವರಿ ಕಾರ್ಯವರಣೆಗೆ ಮತ್ತಷ್ಟು ವೇಗ ಸಿಗಲಿದೆ.

ಇಂದು ಮೈಸೂರಿನ ವಿಜಯನಗರದ ನಾಲ್ಕನೆ ಹಂತದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕಟ್ಟಡ ತೆರವುಗೊಳಿಸಲಾಗಿದೆ.  ಒಟ್ಟು ಎಂಟು ಎಕರೆ ಜಾಗವನ್ನು ಎಂ.ಡಿ.ಎ ವಶಕ್ಕೆ ಪಡೆದಿದೆ. ಈ ಪ್ರಕರಣ ಕೋರ್ಟ್‌ ನಲ್ಲಿತ್ತು. ಇದೀಗ ಕೋರ್ಟ್‌ ಆದೇಶ ಸರಕಾರದ ಪರವಾಗಿಯೇ ಆಗಿದ್ದು, ಒತ್ತುವರಿ ತೆರವುಗೊಳಿಸಿ ಅಲ್ಲಿ ಬೇಲಿ ಹಾಕಲಾಗುವುದು ಎಂದರು.

ಒತ್ತುವರಿ ತೆರವುಗೊಳಿಸಿರುವ ಈ ಜಾಗದಲ್ಲಿ ನಿವೇಶನಗಳನ್ನು ನಿರ್ಮಿಸಿ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಅಂದಾಜು ೨೦೦ ಕೋಟಿ. ರೂ.ಗಳು ಪ್ರಾಧಿಕಾರಕ್ಕೆ ಲಭಿಸಲಿದೆ ಎಂದರು.

ಬಹುತೇಕ ಒತ್ತುವರಿ ಪ್ರಕರಣಗಳಲ್ಲಿ ಒತ್ತುವರಿದಾರರು ಪೋಸಿಷನ್‌ ನಲ್ಲಿ ಇರುವುದನ್ನೇ ಅಡ್ವಾಂಟೇಜ್‌ ಆಗಿ ತೆಗೆದುಕೊಂಡು ಕೋರ್ಟ್‌ ಮೆಟ್ಟಿಲೇರಿರುತ್ತಾರೆ. ಸೂಕ್ತ ದಾಖಲೆ ಒದಗಿಸುವ ಮೂಲಕ ಪ್ರಾಧಿಕಾರದ ಜಾಗ ಸಂರಕ್ಷಿಸಲಾಗುವುದು.

ಲ್ಯಾಂಡ್‌ ಆಡಿಟ್‌  ರಿಪೋರ್ಟ್‌ ಕೈ ಸೇರಿದ ಕೂಡಲೇ ಪ್ರಾಧಿಕಾರದ ಆಸ್ತಿ ಒತ್ತುವರಿ ತೆರವುಗೊಳಿಸಿ ರಕ್ಷಿಸಲಾಗುತ್ತದೆ. ಇನ್ಮುಂದೆ ಪ್ರತಿ ಶನಿವಾರ ಸಂಬಂಧಿಸಿದ ಒತ್ತುವರಿದಾರರಿಗೆ ನೋಟಿಸ್‌ ನೀಡಿ,  ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಆಯುಕ್ತ ರಕ್ಷಿತ್‌ ತಿಳಿಸಿದರು.

KEY WORDS: MYSORE DEVELOPMENT AUTHORITY, MDA, Notice every Saturday, demolition drive on Monday. K.R.Rakshith, commissioner, MDA

vtu

SUMMARY:

K.R.Rakshith, commissioner, MDA

Commissioner Rakshit said that as soon as the land audit report is received, the authority’s property will be cleared of encroachments and protected. From now on, notices will be issued to the concerned encroachers every Saturday and the encroachment clearance process will be taken up on Monday.