Sunday, August 16, 2026

BDA Apartments

Home Front Page ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲ: ನಾನು ರಾಜೀನಾಮೆ ಕೊಟ್ಟರೂ ಅಚ್ಚರಿಯಿಲ್ಲ- ಸಿಡಿದ ಮತ್ತೊಬ್ಬ ‘ಕೈ’...

ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲ: ನಾನು ರಾಜೀನಾಮೆ ಕೊಟ್ಟರೂ ಅಚ್ಚರಿಯಿಲ್ಲ- ಸಿಡಿದ ಮತ್ತೊಬ್ಬ ‘ಕೈ’ ಶಾಸಕ

ಬೆಳಗಾವಿ,ಜೂನ್,23,2025 (www.justkannada.in):  ವಸತಿ ಯೋಜನೆಯಡಿ ಮನೆ ಹಂಚಿಕೆಗೆ ಹಣ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅಸಮಾಧಾನ  ವ್ಯಕ್ತಪಡಿಸಿರುವ ಬೆನ್ನಲ್ಲೆ ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ಸರ್ಕಾರದ ವಿರುದ್ದ ಸಿಡಿದಿದ್ದಾರೆ.

ಹೌದು ಶಾಸಕ ರಾಜೂಕಾಗೆ ಅವರು ರಾಜ್ಯ ಸರ್ಕಾರದ ವಿರುದ್ದ ತಮ್ಮ ಅಸಮಾಧಾನ ತೋರ್ಪಡಿಸಿದ್ದಾರೆ.  ಬಿ.ಆರ್ ಪಾಟೀಲ್ ಆಡಿಯೋ ನಿಜ. ಅವರು ಹೇಳಿರುವುದು  ಸತ್ಯ. ನನಗೂ ಸಾಕಷ್ಟು ನೋವಾಗಿದೆ. ನನ್ನ ಕ್ಷೇತ್ರಕ್ಕೆ 25 ಕೋಟಿ ರೂ.  ಅನುದಾನ ನೀಡಲಾಗಿದೆ.  ಆದರೆ ಎರಡು ವರ್ಷಗಳಿಂದ ವರ್ಕ್ ಆರ್ಡರ್ ಆಗಿಲ್ಲ.

ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ.  ನಾನು ರಾಜೀನಾಮೆ ನೀಡುವ ಮನಸ್ಥಿತಿಗೆ ಬಂದಿದ್ದೇನೆ. ನಾನು ರಾಜೀನಾಮೆ ಕೊಟ್ಟರೂ ಅಚ್ಚರಿಯಿಲ್ಲ ಎಂದು ರಾಜೂಕಾಗೆ ಹೇಳಿದ್ದಾರೆ.vtu

Key words: state, administrative, system , complete, failure, Congress, MLA