Thursday, September 17, 2026

BDA Apartments

ಜಾತಿ ಗಣತಿ ಮರುಸಮೀಕ್ಷೆ: ಇನ್ನೊಮ್ಮೆ ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? ...
Home Front Page ಜಾತಿ ಗಣತಿ ಮರುಸಮೀಕ್ಷೆ: ಇನ್ನೊಮ್ಮೆ ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? – ಸಚಿವ ಸಂತೋಷ್ ಲಾಡ್

ಜಾತಿ ಗಣತಿ ಮರುಸಮೀಕ್ಷೆ: ಇನ್ನೊಮ್ಮೆ ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? – ಸಚಿವ ಸಂತೋಷ್ ಲಾಡ್

ಬೆಂಗಳೂರು,ಜೂನ್,12,2025 (www.justkannada.in):  ಜಾತಿ ಗಣತಿ ಮರುಸಮೀಕ್ಷೆ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧರಿಸಿರುವುದಕ್ಕೆ ವಿಪಕ್ಷ ನಾಯಕರು ಟೀಕಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಇನ್ನೊಮ್ಮೆ ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಸಂತೋಷ ಲಾಡ್ , ಜಾತಿಗಣತಿಯನ್ನ ಮರುಪರಿಶೀಲನೆ ಮಾಡಬೇಕು ಎಂದು ಹೈಕಮಾಂಡ್ ಸೂಚಿಸಿದೆ. ಕೆಲ ಸಮುದಾಯಗಳು ನಮ್ಮ ಜನಸಂಖ್ಯೆ ದೊಡ್ಡದಿದೆ ಅಂದಿದ್ದಾರೆ. ಜಾತಿಗಣತಿ ಮರು ಸರ್ವೆ ಮಾಡಿ ವರದಿ ಜಾರಿಗೊಳಿಸುತ್ತೇವೆ. ಆದರೆ ಇನ್ನೊಮ್ಮೆ ಪರಿಶೀಲನೆ ಮಾಡುವುದರಲ್ಲಿ ಏನು ತಪ್ಪಿದೆ?  ಎಂದರು.

ಕಾಲ್ತುಳಿತ  ಕೇಸ್ ಮುಚ್ಚಿಹಾಕಲು ಜಾತಿ ಗಣತಿ ಮರು ಸರ್ವೇ ಪ್ರಸ್ತಾಪಿಸಿದ್ದಾರೆ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಸಂತೋಷ್ ಲಾಡ್,  ಪಹಲ್ಗಾಂ ದಾಳಿ ಆದಾಗ ಜಾತಿಗಣತಿ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ದೇಶದಲ್ಲಿ ಜಾತಿಗಣತಿ ಮಾಡುತ್ತೇವೆ ಅಂತ ಪ್ರಧಾನಿ ಮೋದಿ ಹೇಳಿದ್ದರು. ಆದರೆ ನಮ್ಮ ಪ್ರಣಾಳಿಕೆಯಲ್ಲಿಯೇ ಜಾತಿ ಗಣತಿ ಇದೆ.  ನಾವು ಜಾರಿ ಮಾಡಿಯೇ ಮಾಡುತ್ತೇವೆ ಎಂದರು.vtu

Key words:  Caste Census, Re-Survey, Minister, Santosh Lad