Thursday, September 17, 2026

BDA Apartments

ಕಾಲ್ತುಳಿತ ಕೇಸ್ ಮುಚ್ಚಿ ಹಾಕಲು ಷಡ್ಯಂತ್ರ: ಜಾತಿಗಣತಿ ಮರು ಸಮೀಕ್ಷೆ ಪ್ರಸ್ತ...
Home Front Page ಕಾಲ್ತುಳಿತ ಕೇಸ್ ಮುಚ್ಚಿ ಹಾಕಲು ಷಡ್ಯಂತ್ರ: ಜಾತಿಗಣತಿ ಮರು ಸಮೀಕ್ಷೆ ಪ್ರಸ್ತಾಪ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಾಲ್ತುಳಿತ ಕೇಸ್ ಮುಚ್ಚಿ ಹಾಕಲು ಷಡ್ಯಂತ್ರ: ಜಾತಿಗಣತಿ ಮರು ಸಮೀಕ್ಷೆ ಪ್ರಸ್ತಾಪ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಮಂಗಳೂರು,ಜೂನ್,12,2025 (www.justkannada.in):  ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣವನ್ನ ಮುಚ್ಚಿ ಹಾಕಲು ರಾಜ್ಯ ಸರ್ಕಾರ ಷಡ್ಯಂತ್ರ ನಡೆಸಿದೆ. ಹೀಗಾಗಿ ಜಾತಿಗಣತಿ ಮರು ಸಮೀಕ್ಷೆಯನ್ನು ಪ್ರಸ್ತಾಪ ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾಕರಂದ್ಲಾಜೆ, ಕಾಲ್ತುಳಿತ ವಿಷಯ ಮರೆ ಮಾಚಲು ಈ ವಿಚಾರ ಎತ್ತಿದ್ದಾರೆ . ಜಾತಿ ಸಮುದಾಯಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶವಿಲ್ಲ ಜಾತಿಗಳ ನಡುವೆ ಒಡೆದಾಡಲು ಈ ರೀತಿ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ಜಾತಿ ಒಡೆಯುವ ಕೆಲಸ ಮಾಡಿದ್ದಾರೆ. ಈಗಲೂ ಸಿದ್ದರಾಮಯ್ಯ ಇದೇ ಕೆಲಸವನ್ನ ಮಾಡುತ್ತಿದ್ದಾರೆ. ಎಲ್ಲೋ ಕುಳಿತುಕೊಂಡು ಜಾತಿ ಜನಗಣತಿ ಮಾಡಿದ್ದಾರೆ ರಾಜ್ಯದಲ್ಲಿ ಹೆಚ್ಚು ಅಲ್ಪಸಂಖ್ಯಾತ ಜನರಿದ್ದಾರೆಂದು ತೋರಿಸಬೇಕು.  ಈ ಮೂಲಕ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕು ಇದು ರಾಜ್ಯ ಸರ್ಕಾರದ ಷಡ್ಯಂತ್ರ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.vtu

Key words: stampede case, Caste census, re-survey, Union Minister, Shobha Karandlaje