Sunday, August 2, 2026

BDA Apartments

Home Front Page ಜಾತಿ ಗಣತಿ ಮರು ಸಮೀಕ್ಷೆ: ಸಂಪುಟ ಸಭೆಯಲ್ಲಿ ಪರಾಮರ್ಶೆ- ಗೃಹ ಸಚಿವ ಪರಮೇಶ್ವರ್

ಜಾತಿ ಗಣತಿ ಮರು ಸಮೀಕ್ಷೆ: ಸಂಪುಟ ಸಭೆಯಲ್ಲಿ ಪರಾಮರ್ಶೆ- ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಜೂನ್,12,2025 (www.justkannada.in):  ಜಾತಿ ಗಣತಿ ಮರುಸಮೀಕ್ಷೆ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಪರಾಮರ್ಶೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್,  ರಾಜ್ಯ ಸರ್ಕಾರದಿಂದ  ಜಾತಿಗಣತಿ ಮರು ಸರ್ವೇಗೆ ನಿರ್ಧರಿಸಲಾಗಿದೆ.  ಇಂದಿನ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ.  ಜಾತಿಗಣತಿ ಮರು ಸರ್ವೇ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.  ಹೀಗಾಗಿ ಇಂದಿನ ವಿಶೇಷ ಸಂಫುಟ ಸಭೆಯಲ್ಲಿ ಪರಿಶೀಲನೆ ಮಡುತ್ತೇವೆ ಎಂದರು.

ಜಾತಿಗಣತಿ ಬಗ್ಗೆ ಅಧೀವೇಶನದಲ್ಲಿ ಚರ್ಚಿಬೇಕಾ  ಅಂತಲೂ  ಚರ್ಚೆ ಮಾಡಲಾಗುತ್ತದೆ. ಹೈಕಮಾಂಡ್  ನಾಯಕರು ಸಹ ಪರಿಶೀಲಿಸಲು ತಿಳಿಸಿದ್ದಾರೆ. ಇಂದನ ಸಭೆಯಲ್ಲಿ ಪರಾಮರ್ಶೆ ಮಾಡುತ್ತೇವೆ ಮರುಸಮೀಕ್ಷೆ ಅಂದ್ರೆ ಮತ್ತೊಂದು ಅವಕಾಶ ಕೊಡೋದು. ಕೆಲವರು ನಮ್ಮ ಸಮುದಾಯ ಬಿಟ್ಟು ಹೋಗಿದೆ ಅಂದಿದ್ದಾರೆ. ಹೀಗಾಗಿ ಇಂದು ಸಂಫುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.vtu

Key words: Caste census, re-survey, meeting, Home Minister, Parameshwar