Monday, August 3, 2026

BDA Apartments

Home Front Page ‘ಕೈ’ ಸಂಸದ ಮತ್ತು ಶಾಸಕರಿಗೆ ಬೆಳ್ಳಂಬೆಳಿಗ್ಗೆ ED ಶಾಕ್: ದಾಳಿ ನಡೆಸಿ ದಾಖಲೆ ಪರಿಶೀಲನೆ

‘ಕೈ’ ಸಂಸದ ಮತ್ತು ಶಾಸಕರಿಗೆ ಬೆಳ್ಳಂಬೆಳಿಗ್ಗೆ ED ಶಾಕ್: ದಾಳಿ ನಡೆಸಿ ದಾಖಲೆ ಪರಿಶೀಲನೆ

ಬಳ್ಳಾರಿ,ಜೂನ್,11,2025 (www.justkannada.in): ವಾಲ್ಮೀಕಿ ಅಭಿವೃದ್ದಿ ನಿಗಮ ಹಣ ದುರ್ಬಳಕೆ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ  ಇಡಿ ಅಧಿಕಾರಿಗಳು ಬಳ್ಳಾರಿ  ಸಂಸದ ಈ.ತುಕಾರಾಂ ಮತ್ತು ಮಾಜಿ ಸಚಿವ ಬಿ.ನಾಗೇಂದ್ರ  ಮನೆ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ಜಿಲ್ಲೆಯ ಸಂಡೂರಲ್ಲಿರುವ ತುಕಾರಾಂ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದು, ಅಗತ್ಯ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ. ಮಾಜಿ ಸಚಿವ ಬಿ.ನಾಗೇಂದ್ರ, ಬಳ್ಳಾರಿ ನಗರ ನಾರಾಭರತ ರೆಡ್ಡಿ, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್  ಮನೆಗಳ ಮೇಲೆ ಕೂಡ ಇಡಿ ದಾಳಿ ನಡೆಸಿದ್ದು ಶೋಧಕಾರ್ಯ ನಡೆಸುತ್ತಿದೆ.

ಮಾಜಿ ಸಚಿವ ಬಿ ನಾಗೇಂದ್ರ ಅವರ ನಿವಾಸ ಕಚೇರಿ ಮೇಲೆ ದಾಳಿಯಾಗಿದ್ದು  ಬಿ ನಾಗೇಂದ್ರಗೆ ಸೇರಿದ ಶಾಸಕರ ಭವನದ ಕೊಠಡಿಯಲ್ಲೂ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿದೆ  ಎಂಬ ಮಾಹಿತಿ ಲಭ್ಯವಾಗಿದೆ.

ಲೋಕಸಭಾ ಚುನಾವಣೆ ವೇಳೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ಮಾಡುತ್ತಿದ್ದಾರೆ.vtu

Key words: ED, Raid, MP, MLAs , House, verification