Friday, September 18, 2026

BDA Apartments

Home Cinema “ಕಲ್ಟ್‌ ಫಾಲೋವರ್ಸ್‌ “ಸಂಪಾದಿಸಿರುವ ಏಕೈಕ ಕ್ರಿಕೆಟ್‌ ಟೀಮ್‌ “RCB”

“ಕಲ್ಟ್‌ ಫಾಲೋವರ್ಸ್‌ “ಸಂಪಾದಿಸಿರುವ ಏಕೈಕ ಕ್ರಿಕೆಟ್‌ ಟೀಮ್‌ “RCB”

"The only cricket team having the 'cult followers' is 'RCB.'"

vtu

ಮೈಸೂರು, ಜೂ.೦೪,೨೦೨೫: ಹದಿನೆಂಟು ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಯಾನೆ ಆರ್.ಸಿ.ಬಿ. ತಂಡ ಈ ಸಾಲಿನ ಐಪಿಎಲ್‌ ಫೈನಲ್ಸ್‌ ನಲ್ಲಿ ಗೆಲುವು ಸಾಧಿಸುವ ಮೂಲಕ “ ಈ ಸಲ ಕಪ್‌ ನಮ್ದು “ ಎಂದು ಫ್ಯಾನ್ಸ್‌  ಎದೆಯುಬ್ಬಿಸಿ ಹೇಳುವಂತೆ ಮಾಡಿದೆ.

ಐಪಿಎಲ್‌ ಅದೆಷ್ಟೋ ತಂಡಗಳಿರಬಹುದು, ಅದೆಷ್ಟು ತಂಡ ಕಪ್‌ ಗೆದ್ದಿರಬಹುದು, ಆದರೆ ಒಮ್ಮೆಯೂ ಕಪ್‌ ಗೆಲ್ಲದ ತಂಡವೊಂದಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಫ್ಯಾನ್‌ ಫಾಲೋವರ್ಸ್‌ ಇರೋದು ನೋಡಿದ್ರೆ, ಆರ್.ಸಿ.ಬಿ ಅಂದ್ರೆ ಅದೊಂದು ತಂಡವಲ್ಲ, ಬದಲಿಗೆ ಅದೊಂದು “ ಬ್ರ್ಯಾಂಡ್‌ “ ಎಂಬಂತಾಗಿದೆ.

ಸಾಮಾನ್ಯವಾಗಿ ಐಪಿಎಲ್‌ ಪಂದ್ಯದ ಟಿಕೆಟ್‌ ಗಳು ೫೦೦ ರಿಂದ ೫೦೦೦ ರೂ.ಗಳ ವರೆಗೆ ನಿಗಧಿಯಾಗಿದ್ರೆ, ಆರ್.ಸಿ.ಬಿ ಆಡುವ ಪಂದ್ಯಗಳಿಗೆ ಟಿಕೆಟ್ ಗಳು ೨೦೦೦ ರೂ.ಗಳಿಂದ ೫೦ ಸಾವಿರ ರೂ.ಗಳ ವರೆಗೆ ಬಿಕರಿಯಾಗುತ್ತವೆ. ಅದು ಆರ್ಸಿಬಿ ಕ್ರೇಜ್.‌

words ipl

ಆರ್ಸಿಬಿಯ ಕಡು ವೈರಿ ಎಂದೇ ಬಿಂಬಿತವಾಗಿರುವ ತಮಿಳುನಾಡಿನ ಸಿಎಸ್ಕೆ ಯಾನೆ “ ಚೆನ್ನೈ ಸೂಪರ್‌ ಕಿಂಗ್ಸ್‌ “ ತಂಡ ಐದು ಬಾರಿ ಐಪಿಎಲ್‌ ಕಪ್‌ ಗೆದ್ದಿದೆ. ಆದರೂ ಆ ತಂಡಕ್ಕೆ ನಿಯತ್ತಾಗಿರುವ ಫ್ಯಾನ್‌ ಬೇಸ್‌ ಇಲ್ಲ. ತಂಡ ಏನಾದರು ಮ್ಯಾಚ್‌ ಸೋತರೆ ಸಿಎಸ್ಕೆ ಅಭಿಮಾನಿಗಳ ಕೆಂಗಣ್ಣಿಗೆ ಆಟಗಾರರು ಗುರಿಯಾಗಬೇಕಾಗುತ್ತದೆ. ಅದು ಥಲಾ ದೋನಿಯೇ ಆಗಿದ್ರು ಸರಿ, ಜನ್ಮ ಜಾಲಾಡಿ ಬಿಡುತ್ತಾರೆ ಅಭಿಮಾನಿಗಳು.

ಆದರೆ, ವಿಪರ್ಯಾಸವೆಂದರೆ, ಆರ್ಸಿಬಿ ಸೋತ ಯಾವ ಪಂದ್ಯದಲ್ಲೂ ಫ್ಯಾನ್ಸ್‌ ತಂಡದ ಮೇಲಿನ ವಿಶ್ವಾಸ ಕಳೆದುಕೊಳ್ಳುವುದಿಲ್ಲ, ಬದಲಿಗೆ ಜೋಶ್‌ ನಿಂದಲೇ ಮುಂದಿನ ಪಂದ್ಯಾವಳಿಯಲ್ಲೂ “ ಈ ಸಲ ಕಪ್‌ ನಮ್ದೆ” ಎಂದೇ ಹುರಿದುಂಬಿಸುತ್ತಾರೆ.

ಅಭಿಮಾನಿಗಳ ಈ ಪ್ರೀತಿಯೇ ಆಟಗಾರರ ಪಾಲಿಗೆ ಪ್ರೇರಣೆ, ತಂಡದ ಪ್ರಮುಖ ಆಟಗಾರ ವಿರಾಟ್‌ ಕೋಯ್ಲಿ, ಕೆಲ  ವರ್ಷಗಳ ಹಿಂದೆ ಮಹಿಳಾ ಆರ್ಸಿಬಿ ತಂಡದವರಿಗೆ ಮಾಡಿದ ಮೋಟಿವೇಷನಲ್‌ ಸ್ಪೀಚ್‌ ನಲ್ಲಿ ಈ ಅಂಶವನ್ನು ಊಲ್ಲೇಖಿಸಿದ್ದಾರೆ. ಪ್ರತಿ ಸೀಸನ್‌ ನಲ್ಲೂ ನಾವು ಕಪ್‌ ಗೆಲ್ಲಲಾಗದು, ಆದರೆ ಪಂದ್ಯವನ್ನು ಗೆಲ್ಲಲ್ಲೇ ಬೇಕು ಎಂಬ ನಿಟ್ಟಿನಲ್ಲಿ  ಶೇ ೧೦೦ ರಷ್ಟು ಎಫರ್ಟ್ ಹಾಕ್ತೀವಿ. ಆ ಮೂಲಕ ಅಭಿಮಾನಿಗಳಿಗೆ ನಿರಾಸೆ ಉಂಟಾಗದಂತೆ ಆಡಿದ ಆತ್ಮತೃಪ್ತಿ ನಮಗೆ ಎಂದಿದ್ದರು.

cricket team rcb-new rcb new

ಆರ್ಸಿಬಿ ಬೇಸ್‌ ಬೆಂಗಳೂರೇ ಆದ್ರೂ ಫ್ಯಾನ್ಸ್‌ ಮಾತ್ರ ವರ್ಲ್ಡ್‌ ವೈಡ್.‌ ಭಾಷೆ, ರಾಜ್ಯ, ದೇಶದ ಗಡಿ ಮೀರಿ “ ಕಲ್ಟ್‌ ಫಾಲೋವರ್ಸ್‌ “ಸಂಪಾದಿಸಿರುವ ಏಕೈಕ ಕ್ರಿಕೆಟ್‌ ಟೀಮ್‌ ನಮ್ಮ ಆರ್ಸಿಬಿ.

key words:  cricket team, ‘cult followers’, RCB, Virat Kohli, Bangalore,

vtu

 

“The only cricket team having the ‘cult followers’ is ‘RCB.'”