Thursday, September 17, 2026

BDA Apartments

ತಮಿಳುನಾಡಿದ ಈ ಬಾಲಕನ ಪ್ರಾಮಾಣಿಕತೆಗೆ “ತಲೈವಾ” ಫಿದಾ..! BDA JK_Adv BDA Adv
Home Cinema ತಮಿಳುನಾಡಿದ ಈ ಬಾಲಕನ ಪ್ರಾಮಾಣಿಕತೆಗೆ “ತಲೈವಾ”  ಫಿದಾ..!

ತಮಿಳುನಾಡಿದ ಈ ಬಾಲಕನ ಪ್ರಾಮಾಣಿಕತೆಗೆ “ತಲೈವಾ”  ಫಿದಾ..!

This boy sitting on the lap of Super Star Rajinikanth is now an example of integrity in Tamil Nadu.

 

ಚೆನ್ನೈ, ಜೂನ್.‌೦೨,೨೦೨೫: ಸೂಪರ್ ಸ್ಟಾರ್ ರಜನಿಕಾಂತ್ ಅವರ ತೊಡೆ ಮೇಲೆ ಕುಳಿತಿರುವ ಈ ಬಾಲಕ ಈಗ ತಮಿಳುನಾಡಿನಲ್ಲಿ ಪ್ರಾಮಾಣಿಕತೆಗೊಂದು ಉದಾಹರಣೆ.

ಈರೋಡ್‌ ನ ಮೊಹಮ್ಮದ್ ಯಾಸಿನ್ ನ ಪ್ರಾಮಾಣಿಕತೆ ಈಗ ಆತನನ್ನು ಸೂಪರ್‌ ಸ್ಟಾರ್‌ ರಜನಿಕಾಂತ್‌ ಭೇಟಿಯಾಗುವ ಅವಕಾಶ ಕಲ್ಪಿಸಿದೆ. ಜತೆಗೆ ಈತನ ಓದಿನ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುವದಾಗಿ ತಲೈವಾ ಹೇಳಿರುವುದು ಮತ್ತೊಂದು ವಿಶೇಷ.

vtu

ಏನಿದು ಘಟನೆ:

ರಸ್ತೆಯಲ್ಲಿ ಸಿಕ್ಕ  50 ಸಾವಿರ ರೂಪಾಯಿಗಳನ್ನು ಕಂಡ ಬಾಲಕ ಯಾಸಿನ್‌, ಅದನ್ನು ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ನೀಡುತ್ತಾನೆ.  “ನಾನಗೆ ಈ ಹಣ ರಸ್ತೆಯಲ್ಲಿ ಹೋಗುವಾಗ ಸಿಕ್ಕಿತು. ಇದರ ಮಾಲೀಕರು ಯಾರೋ, ಅವರನ್ನು ಹುಡುಕಿ ಅದನ್ನು ಅವರಿಗೆ ಹಿಂತಿರುಗಿಸಿ” ಎಂದು ಕೇಳಿಕೊಳ್ಳುತ್ತಾನೆ.

ಆಗ, ಆ ಪೋಲೀಸ್ ಅಧಿಕಾರಿ ಮಗುವನ್ನು ಈ ಹಣವನ್ನು ಏಕೆ ನೀನೇ ಇಟ್ಟುಕೊಳ್ಳಲಿಲ್ಲ ಎಂದು ಪ್ರಶ್ನಿಸುತ್ತಾರೆ. ಆಗ ಯಾಸಿನ್ ಈ ಹಣ ಯಾರೋ ಕಷ್ಟಪಟ್ಟು ಸಂಪಾದಿಸಿದ ಹಣ ಎಂದು ಉತ್ತರಿಸಿ, ಇದು ನನ್ನದಲ್ಲ. ಆದ್ದರಿಂದ ನಾನು ಅದನ್ನು ನನ್ನ ಬಳಿ ಹೇಗೆ ಇಟ್ಟುಕೊಳ್ಳಲಿ ಎಂದು ಉತ್ತರಿಸುತ್ತಾನೆ.

ಆ ಬಾಲಕನ ಪ್ರಾಮಾಣಿಕತೆ ನೋಡಿದ ಪೊಲೀಸ್ ಅಧಿಕಾರಿ,  ಯಾಸಿನ್ ನನ್ನು ನಾವು ಪೂರೈಸಬಹುದಾದ ನಿಮ್ಮ ಒಂದು ಆಸೆಯನ್ನು ಹೇಳು ಎನ್ನುತ್ತಾರೆ. ಆಗ ಯಾಸಿನ್ ತಕ್ಷಣ  ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭೇಟಿಯಾಗುವ ಬಯಕೆ  ವ್ಯಕ್ತಪಡಿಸಿದ.

ಹಣವನ rajanikanth

ಬಳಿಕ ಯಾಸಿನ್‌ ನ್ನನು ರಜನಿಗೆ ಪರಿಚಯಿಸಲಾಯಿತು. ರಜನಿಕಾಂತ್ ಮಗುವಿನ ಪೋಷಕರಿಗೆ ಈ ಮಗುವಿನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದರು. ಇಂದಿನಿಂದ, ನಾನು ಈ ಮಗುವನ್ನು ನನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತೇನೆ ಎಂದು ಘೋಷಿಸಿದರು.

key words: boy sitting on the lap, Super Star Rajinikanth, integrity, Tamil Nadu.

vtu

This boy sitting on the lap of Super Star Rajinikanth is now an example of integrity in Tamil Nadu.