ಮೈಸೂರು,ಮೇ,27,2025 (www.justkannada.in): ಮೈಸೂರು ಮಹಾರಾಜರಿಂದ ಸ್ಥಾಪಿತವಾದ ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯ ಅಭಿವೃದ್ಧಿಯ ವಿಚಾರವಾಗಿ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಮತ್ತು ಅಧ್ಯಾಪಕ ವೃಂದ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಕೆ ವಿವೇಕಾನಂದ ಅವರನ್ನು ಅವರ ಶಾಸಕರ ಕಛೇರಿಯಲ್ಲಿ ಭೇಟಿ ಮಾಡಿ ಸಂಸ್ಕೃತ ಪಾಠ ಶಾಲೆಯ ಕಟ್ಟಡ ದುಸ್ಥಿತಿಯ ಬಗ್ಗೆ ವಿವರಿಸಿದ್ದರು.
ಹಾಗೆಯೇ ಅದನ್ನು ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಮನವರಿಕೆ ಮಾಡಿಕೊಟ್ಟು ಕಾಲೇಜಿನ ಕಟ್ಟಡವನ್ನು ದುರಸ್ತಿಗೊಳಿಸಿಕೊಡುವಂತೆ ಕೋರಲಾಗಿತ್ತು.
ಈ ಸಂಬಂಧ ಇಂದು ಎಂಎಲ್ ಸಿ ವಿವೇಕಾನಂದ ಸಂಸ್ಕೃತ ಕಾಲೇಜಿಗೆ ಭೇಟಿಕೊಟ್ಟು ಅಲ್ಲಿಯ ಕಟ್ಟಡದ ದುಸ್ಥಿತಿಯ ಬಗ್ಗೆ ಖುದ್ದು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಪಿಡಬ್ಲ್ಯೂಡಿ ಅಭಿಯಂತರರಿಗೆ ದೂರವಾಣಿ ಮುಖಾಂತರ ಮಾತನಾಡಿ ಕೂಡಲೇ ಈ ವಿಚಾರವಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
Key words: MLC, Vivekananda,visit, Mysore, Maharaja Sanskrit School