ಮೈಸೂರು: ಪ್ರಾಥಮಿಕ ಶಾಲೆ ಆರಂಭಕ್ಕೆ ಭೂಮಿ ಪೂಜೆ

ಮೈಸೂರು,ಮೇ,26,2025 (www.justkannada.in): ಮೈಸೂರಿನ ದಟ್ಟಗಳ್ಳಿ ಬಡಾವಣೆಯಲ್ಲಿ ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಶ್ರುತಕೇವಲಿ ಎಜುಕೇಷನ್ ಟ್ರಸ್ಟ್(ರಿ)ನಿಂದ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗುತ್ತಿದೆ.

ಶ್ರೀ ಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸಂಸ್ಥೆಯಾದ ಶ್ರುತಕೇವಲಿ ಎಜುಕೇಷನ್ ಟ್ರಸ್ಟ್(ರಿ) ವತಿಯಿಂದ ಪ್ರಾಥಮಿಕ ಶಾಲೆ ಆರಂಭಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.

 

ಮೈಸೂರಿನ ದಟ್ಟಗಳ್ಳಿಯಲ್ಲಿರುವ ಶ್ರುತಕೇವಲಿ ಎಜುಕೇಷನ್ ಟ್ರಸ್ಟ್(ರಿ)ನ ನಿವೇಶನದಲ್ಲಿ (ಸಾರಾ ಮಹೇಶ್ ಸಮುದಾಯ ಭವನ ಹತ್ತಿರ ರೋಡ್ ಪಕ್ಕದಲ್ಲಿ) ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸುವ  ಉದ್ದೇಶದಿಂದ  ಇಂದು ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೋರ್‌ವೆಲ್ ತೆಗೆಸುವ ಕಾರ್ಯಕ್ಕೆ  ಚಾಲನೆ ನೀಡಲಾಯಿತು.vtu

ಈ ವೇಳೆ   ಮೈಸೂರು ದಟ್ಟಗಳ್ಳಿ ನಿವೇಶನ ಯೋಜನಾ ಕಾರ್ಯಾನುಷ್ಠಾನ ಸಮಿತಿ ಅಧ್ಯಕ್ಷರು ಎಂ.ಎ. ಸುಧೀರ್ ಕುಮಾರ್, ಸದಸ್ಯರಾದ ಹರೀಶ್ ಕುಮಾರ್ ಹೆಗ್ಡೆ, ಸುರೇಶ್ ಕುಮಾರ್ ಜೈನ್,  ಎಂ.ಆರ್. ಸುನೀಲ್ ಕುಮಾರ್, ವಿನೋದ್ ಬಾಕ್ಲಿವಾಲ್ , ಉದ್ಯಮಿಯಾದ ಎಸ್.ಪಿ. ರಾಜೇಶ್ ಜೈನ್, ಮಠದ ಭಕ್ತರು ಸೇರಿ ಹಲವರು ಭಾಗಿಯಾಗಿದ್ದರು.

Key words: Mysore, Bhoomi Pooja, start, primary school